ಮಂಗಳೂರು: ಪ್ರತ್ಯೇಕ ಪ್ರಕರಣದಲ್ಲಿ ಇಬ್ಬರು ಮಹಿಳೆಯರ ನಾಪತ್ತೆ
Update: 2018-04-09 22:22 IST
ಮಂಗಳೂರು, ಎ.9: ಪಾಂಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರತ್ಯೇಕ ಪ್ರಕರಣದಲ್ಲಿ ಇಬ್ಬರು ಮಹಿಳೆಯರು ನಾಪತ್ತೆಯಾದ ಬಗ್ಗೆ ವರದಿಯಾಗಿದೆ.
ಸೂಟರ್‌ಪೇಟೆಯ ರೈಲ್ವೆ ಕ್ರಾಸ್ ರಸ್ತೆಯ ನಿವಾಸಿ ಮನೋಜ್ ಮೆನೆಜೆಸ್‌ರ ಪತ್ನಿ ಬಿನ್ಸಿ ಬಿ.ಎಸ್ (26) ಎಂಬಾಕೆ ಕಾಣೆಯಾಗಿದ್ದಾರೆ. 5 ಅಡಿ ಎತ್ತರದ ಇವರು ಗೋಧಿ ಮೈಬಣ್ಣ, ಸಾಧಾರಣ ಶರೀರ, ಎಡ ಹಣೆಗೆ ತರಚಿದ ಗಾಯದ ಗುರುತು ಹೊಂದಿದ್ದಾರೆ. ಕಾಣೆಯಾದ ಸಂದರ್ಭ ಚೂಡಿಧಾರ ಧರಿಸಿದ್ದಾರೆ. ಕನ್ನಡ, ತುಳು, ಮಲಯಾಳಂ ಭಾಷೆ ಮಾತನಾಡುವರು.
ಸುಮಾರು 40 ವರ್ಷ ಪ್ರಾಯದ ಆಶಾಲತಾ ಎಂಬವರು ಕೂಡ ನಾಪತ್ತೆಯಾಗಿದ್ದಾರೆ. 5.2 ಅಡಿ ಎತ್ತರದ ಇವರು ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ಕೆಂಪು ಹಾಗೂ ಬಿಳಿ ಬಣ್ಣದ ಹೂವಿನ ಡಿಸೈನ್ ಇರುವ ನೈಟಿ ಧರಿಸಿದ್ದರು. ಕನ್ನಡ ಭಾಷೆ ಮಾತನಾಡುತ್ತಾರೆ.
ಇವರ ಬಗ್ಗೆ ಮಾಹಿತಿ ದೊರತಲ್ಲಿ ಮಂಗಳೂರು ದಕ್ಷಿಣ ಪೊಲೀಸ್ ಠಾಣೆ (0824-2220518)ಯನ್ನು ಸಂಪರ್ಕಿಸಲು ಪೊಲೀಸ್ ಇಲಾಖೆಯ ಪ್ರಕಟನೆ ತಿಳಿಸಿದೆ.