ಎ.10: ದೇರಳಕಟ್ಟೆ ಕೆ.ಎಸ್.ಹೆಗ್ಡೆ ಅಕಾಡೆಮಿಯ ಆವರಣದಲ್ಲಿ ಭಾರತ -ಸ್ವಿಝ್ ಸಹಯೋಗದ ಚಲನಚಿತ್ರ ಪ್ರದರ್ಶನ
Update: 2018-04-09 22:26 IST
ಮಂಗಳೂರು, ಎ. 9: ನಿಟ್ಟೆ ವಿಶ್ವ ವಿದ್ಯಾನಿಲಯದ ಫಿಲಂ ಸೊಸೈಟಿ ಮತ್ತು ಸ್ವಿಝ್ ರಾಯಭಾರಿ ಕಚೇರಿಯ ಸಹಯೋಗದೊಂದಿಗೆ ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಮೆಡಿಕಲ್ ಅಕಾಡೆಮಿಯ ಮೈದಾನದಲ್ಲಿ ಎ.10ರಂದು ಸಂಜೆ 7.30ಕ್ಕೆ ಆಸ್ಕರ್ ಪ್ರಶಸ್ತಿಗೆ ನಾಮ ನಿರ್ದೇಶನ ಗೊಂಡ ಏನಿಮೇಶನ್ ಚಲನಚಿತ್ರ ‘ಮಾ ವಿ ಡೇ ಕೋರ್‌ಗೆಟ್’ಎಂಬ ಫ್ರೆಂಚ್ ಭಾಷೆಯ ಮಕ್ಕಳ ಚಲನಚಿತ್ರ ಪ್ರದರ್ಶನಗೊಳ್ಳಲಿದೆ.
ಭಾರತ -ಸ್ವಿಝರ್ ಲ್ಯಾಂಡ್ ನಡುವಿನ 70 ವರ್ಷಾಚರಣೆಯ ಬಾಂಧವ್ಯದ ಹಿನ್ನೆಲೆಯಲ್ಲಿ ದೇಶಾದ್ಯಂತ ವಿವಿಧ ಕಡೆಗಳಲ್ಲಿ ಭಾರತ-ಸ್ವಿಝ್ ಚಲನಚಿತ್ರ ಪ್ರದರ್ಶನ ಗೊಳ್ಳಲಿದೆ. ಜೊತೆಗೆ ಸಾರ್ವಜನಿಕರೊಂದಿಗೆ ಸಂವಾದ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ನಿಟ್ಟೆ ವಿಶ್ವ ವಿದ್ಯಾನಿಲಯದಲ್ಲಿ ಎ.16-19 ನಡೆಯಲಿರುವ ಅಂತರಾಷ್ಟ್ರೀಯ ಚಲನಚಿತ್ರ ಉತ್ಸವದ ಪೂರ್ವಭಾವಿಯಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.