×
Ad

ಫೇಸ್‌ಬುಕ್ ಖಾತೆ ಸ್ಥಗಿತಗೊಳಿಸಿದ ಆ್ಯಪಲ್ ಸಹಸ್ಥಾಪಕ

Update: 2018-04-09 22:35 IST

ಸ್ಯಾನ್‌ಫ್ರಾನ್ಸಿಸ್ಕೊ,ಎ.9: ಬಳಕೆದಾರರ ಖಾಸಗಿ ಮಾಹಿತಿಗಳ ಸೋರಿಕೆ ಮಾಡಿದ ವಿವಾದದ ಸುಳಿಗೆ ಫೇಸ್‌ಬುಕ್ ಸಿಲುಕಿರುವಂತೆಯೇ, ವಿಶ್ವವಿಖ್ಯಾತ ಕಂಪ್ಯೂಟರ್ ಹಾಗೂ ಇಲೆಕ್ಟ್ರಾನಿಕ್ ತಂತ್ರಜ್ಞಾನ ಸಂಸ್ಥೆ ಆ್ಯಪಲ್‌ನ ಸಹಸಂಸ್ಥಾಪಕ ಸ್ಟೀವ್ ವೊಝ್ನಾಯಿಕ್ ಅವರು ತನ್ನ ಫೇಸ್‌ಬುಕ್ ಖಾತೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಿದ್ದಾರೆ.

ಬಳಕೆದಾರರು ಒದಗಿಸುವ ವೈಯಕ್ತಿಕ ವಿವರಗಳನ್ನು ಮಾರಾಟ ಮಾಡಿ ಫೇಸ್‌ಬುಕ್ ಸಾಕಷ್ಟು ಹಣ ಸಂಪಾದಿಸುತ್ತಿದೆಯೆಂದು ವೊಝ್ನಿಯಿಕ್ ಅವರು ಯುಎಸ್‌ಎ ಟುಡೇ ಪತ್ರಿಕೆಗೆ ಕಳುಹಿಸಿರುವ ಇಮೇಲ್ ಪತ್ರದಲ್ಲಿ ತಿಳಿಸಿದ್ದಾರೆ. ಬಳಕೆದಾರರ ಮಾಹಿತಿಯನ್ನು ಆಧರಿಸಿ ಲಾಭಗಳನ್ನು ಗಳಿಸಲಾಗುತ್ತಿದೆ. ಆದರೆ ಇದಕ್ಕಾಗಿ ಬಳಕೆದಾರರಿಗೆ ಯಾವುದೇ ರೀತಿಯ ಲಾಭವವಾಗುತ್ತಿಲ್ಲ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News