ಮಾಹಿತಿ ಸೋರಿಕೆ ಹಗರಣ: ಕೆನಡಾ ಸಂಸ್ಥೆ ಜೊತೆ ನಂಟು ಕಡಿದುಕೊಂಡ ಫೇಸ್‌ಬುಕ್

Update: 2018-04-09 17:31 GMT

ಮೆನ್ಲೊ ಪಾರ್ಕ್,ಎ.9: ಬಳಕೆದಾರರ ಮಾಹಿತಿ ಸೋರಿಕೆಯ ಹಗರಣದಿಂದ ತತ್ತರಿಸಿರುವ ಸಾಮಾಜಿಕ ಜಾಲತಾಣ ಸಂಸ್ಥೆ ಪೇಸ್‌ಬುಕ್, ಇದೀಗ ಕೆನಡದ ರಾಜಕೀಯ ಸಮಾಲೋಚಕ ಸಂಸ್ಥೆಯೊಂದರ ಜೊತೆಗಿನ ತನ್ನ ಸಂಪರ್ಕವನ್ನು ಕೂಡಾ ಅಮಾನತಿನಲ್ಲಿರಿಸಿದೆ.

ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಮೇಲೆ ಪ್ರಭಾವವನ್ನು ಬೀರಲು 8.70 ಕೋಟಿ ಫೇಸ್‌ಬುಕ್ ಬಳಕೆದಾರರ ಮಾಹಿತಿಯನ್ನು ಕದ್ದಿರುವ ಆರೋಪ ಎದುರಿಸುತ್ತಿರುವ ಕೇಂಬ್ರಿಜ್ ಆನಲಿಟಿಕಾ ಜೊತೆ ಕೆನಡಾದ ರಾಜಕೀಯ ಸಮಾಲೋಜಕ ಸಂಸ್ಥೆ ಆಗ್ರೆಗೇಟ್ ಐಕ್ಯೂ ನಂಟು ಹೊಂದಿರುವುದಕ್ಕಾಗಿ ಅದು ಈ ಕ್ರಮ ಕೈಗೊಂಡಿದೆ. ಆದಾಗ್ಯೂ ಆಗ್ರೆಗೇಟ್ ಐಕ್ಯೂ ಅಸಮರ್ಪಕವಾಗಿ ಫೇಸ್‌ಬುಕ್ ಬಳಕೆದಾರರ ಮಾಹಿತಿಗಳನ್ನು ಪಡೆದಿರಬಹುದೆಂದು ತಾನು ಭಾವಿಸುವುದಾಗಿ ಕ್ಯಾಲಿಫೋರ್ನಿಯಾದಲ್ಲಿರುವ ಫೇಸ್‌ಬುಕ್ ಮುಖ್ಯ ಕಾರ್ಯಾಲಯದ ವಕ್ತಾರ ಮೆನ್ಲೊ ಪಾರ್ಕ್ ತಿಳಿಸಿದ್ದಾರೆ.

   ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅಧ್ಯಕ್ಷೀಯ ಚುನಾವಣಾ ಪ್ರಚಾರಕ್ಕಾಗಿ ಕೇಂಬ್ರಿಜ್ ಅನಾಲಿಟಿಕಾವನ್ನು ನಿಯೋಜಿಸಲಾಗಿತ್ತು. ಸಂಸ್ಥೆಯು 3 ಕೋಟಿ ಫೇಸ್‌ಬುಕ್ ಬಳಕೆದಾರರ ಮಾಹಿತಿಯನ್ನು ಪಡೆದಿರುವೆನಾದರೂ ಅದನ್ನು ಯಾವತ್ತೂ ಚುನಾವಣಾ ಪ್ರಚಾರಕ್ಕೆ ಬಳಸಿಲ್ಲವೆಂದು ಕೇಂಬ್ರಿಜ್ ಅನಾಲಿಟಿಕಾ ಹೇಳಿದೆ.

ಬ್ರಿಟನ್ ಯುರೋಪ್ ಒಕ್ಕೂಟದಿಂದ ನಿರ್ಗಮನವನ್ನು ಬೆಂಬಲಿಸುವ ಅಭಿಯಾನದ ಪರವಾಗಿ ಪ್ರಚಾರ ನಡೆಸಲು ಕೆನಡ ಮೂಲದ ಆ್ಯಗ್ರಿಗೇಟ್ ಐಕ್ಯೂ ಸಂಸ್ಥೆಯ ಸೇವೆಯನ್ನು ಪಡೆಯಲಾಗಿತ್ತು ಎಂದು ಮಾಹಿತಿ ಬಯಲಿಗರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News