ಮುಖದ ಸ್ಕಾನ್‌ನ ಮೂಲಕ ಭದ್ರತಾ ತಪಾಸಣೆ

Update: 2018-04-09 17:38 GMT

ಬೀಜಿಂಗ್,ಎ.9: ಪ್ರವಾಸಿಗರ ಅನುಕೂಲಕ್ಕಾಗಿ ಭದ್ರತಾ ತಪಾಸಣೆಗಳನ್ನು ತ್ವರಿತಗೊಳಿಸಲು ನೆರವಾಗುವುದಕ್ಕಾಗಿ ಚೀನಾಲ್ಲಿ ಬಹುತೇಕ ವಿಮಾನನಿಲ್ದಾಣಗಳಲ್ಲಿ ಮುಖಚಹರೆಯನ್ನು ಗುರುತಿಸುವ ವ್ಯವಸ್ಥೆಯ ತಂತ್ರಜ್ಞಾನವನ್ನು ಬಳಕೆಯಾಗುತ್ತಿವೆ.

 ಶಾಂಘೈನ ಪುಡೊಂಗ್ ಅಂತಾರಾಷ್ಟ್ರೀಯ ವಿಮಾನನಿಲ್ದಾಣ ಹಾಗೂ ಗುವಾಂಗ್‌ಝೌ ಬೈಯೂನ್ ಅಂತಾರಾಷ್ಟ್ರೀಯ ವಿಮಾನನಿಲ್ದಾಣಗಳಲ್ಲಿ ಮುಖಚಹರೆ ಗುರುತಿಸುವಿಕೆ ತಂತ್ರಜ್ಞಾನವನ್ನು ಆಳವಡಿಸಲಾಗಿದೆಯೆಂದು ಪರಿಸರಸ್ನೇಹಿ ಹಾಗೂ ಬೌದ್ಧಿಕತೆ ತಂತ್ರಜ್ಞಾನಕ್ಕಾಗಿನ ಚೊಂಗ್‌ಕ್ವಿಂಗ್ ಇನ್ಸಿಟ್ಯೂಟ್ ತಿಳಿಸಿದೆ.

 ಚೀನಾದ  ಶೇ.80ರಷ್ಟು ವಿಮಾನನಿಲ್ದಾಣಗಳಲ್ಲಿ ಈ ವ್ಯವಸ್ಥೆಯನ್ನು ಬಳಸಲಾಗಿದ್ದು, ಅವು ಅತ್ಯಂತ ನಿಖರತೆ ಹಾಗೂ ದಕ್ಷತೆಯನ್ನು ಪ್ರದರ್ಶಿಸಿವೆ ಎಂದು ಕ್ಸಿನುವಾ ಸುದ್ದಿಸಂಸ್ಥೆ ವರದಿ ಮಾಡಿದೆ. ಈ ವಿಮಾನನಿಲ್ದಾಣಗಳಿಗೆ ಆಗಮಿಸುವ ಪ್ರಯಾಣಿಕರ ಸಂಖ್ಯೆ ವಾರ್ಷಿಕವಾಗಿ 3 ಕೋಟಿಯನ್ನು ದಾಟುತ್ತದೆಯೆಂದು ಸಂಸ್ಥೆಯ ವರಿಷ್ಠರಾದ ಶಿ ಯೂ ತಿಳಿಸಿದ್ದಾರೆ.

 ಈ ವ್ಯವಸ್ಥೆಯೊಂದಿಗೆ ಪ್ರಯಾಣಿಕರು ವಿಮಾನನಿಲ್ದಾಣಕ್ಕೆ ಆಗಮಿಸುವ ಸಂದರ್ಭದಲ್ಲಿ ವಿವಿಧ ತಪಾಸಣಾ ವಿಧಾನಗಳಿಂದ ಮುಕ್ತರಾಗುತ್ತಾರೆ ಹಾಗೂ ಅವರು ನೇರವಾಗಿ ಭದ್ರತಾ ತಪಾಸಣೆ ವಿಭಾಗಕ್ಕೆ ತೆರಳಬಹುದಾಗಿದೆ. ಅಲ್ಲಿ ಅತ್ಯಾಧುನಿಕ ಕ್ಯಾಮರಾಗಳು ಪ್ರಯಾಣಿಕರ ಮುಖದ ಭಾವಚಿತ್ರ ಸೆರೆಹಿಡಿಯುತ್ತವೆ ಹಾಗೂ ಅವರ ಗುರುತನ್ನು ದೃಢೀಕರಿಸುವುದಕ್ಕಾಗಿ ಅವರಲ್ಲಿರುವ ಐಡಿಕಾರ್ಡ್‌ಗಳು ಹಾಗೂ ಪಾಸ್‌ಪೋರ್ಟ್‌ಗಳನ್ನು ಸ್ಕಾನ್ ಮಾಡುತ್ತವೆ.

 ಪ್ರಯಾಣಿಕರ ಮುಖದ ಭಾವಚಿತ್ರವನ್ನು ಹಾಗೂ ಅವರ ಐಡಿ ಫೋಟೊದೊಂದಿಗೆ ಹೋಲಿಕೆ ಮಾಡಲು ಈ ಅತ್ಯಾಧುನಿಕ ವ್ಯವಸ್ಥೆಗೆ ಕೇವಲ ಒಂದು ಸೆಕೆಂಡ್ ಸಾಗುವುದೆಂದು, ಸಂಸ್ಥೆಯ ವರಿಷ್ಠರಾದ ಶಿ ಯು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News