ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ: ನೇಪಾಳದಲ್ಲಿ ಕೆನಡ ಪ್ರಜೆಯ ಬಂಧನ

Update: 2018-04-09 17:57 GMT

ಕಠ್ಮಂಡು,ಎ.9: ಬಡಮಕ್ಕಳಿಗೆ ಮಾನವೀಯ ನೆರವು ನೀಡುವ ಸೋಗಿನಲ್ಲಿ ಅವರ ಮೇಲೆ ಲೈಂಗಿಕ ದೌರ್ಜನ್ಯವೆಸಗುತ್ತಿದ್ದನೆನ್ನಲಾದ 60 ವಯಸ್ಸಿನ ಕೆನಡದ ಪ್ರಜೆಯೊಬ್ಬನನ್ನು ಕಠ್ಮಂಡುವಿನಲ್ಲಿ ಬಂಧಿಸಲಾಗಿದೆಯೆಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ನೇಪಾಳದಲ್ಲಿ ಹಿಮಾಲಯನ್ ಕಮ್ಯುನಿಟಿ ಫೌಂಡೇಶನ್ ಎಂಬ ಎನ್‌ಜಿಒ ಸಂಸ್ಥೆಯನ್ನು ನಡೆಸುತ್ತಿರುವ ಪೀಟರ್ ಜೋನ್ ಡಾಲ್‌ಗ್ಲಿಶ್ ಬಂಧಿತ ಆರೋಪಿಯಾಗಿದ್ದಾನೆ. ಆತನಿಂದ ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದಾರೆನ್ನಲಾದ 12 ಹಾಗೂ 14 ವರ್ಷ ವಯಸ್ಸಿನ ಇಬ್ಬರು ಮಕ್ಕಳನ್ನು ಮೆಂಧನ್ ದೇವ್‌ಪುರ ನಗರಗದಲ್ಲಿರುವ ಆತನ ನಿವಾಸದಿಂದ ಪೊಲೀಸರು ರಕ್ಷಿಸಿದ್ದಾರೆ. ಡಾಲ್‌ಗ್ಲಿಶ್‌ನಿಂದ ಇನ್ನೂ ಹಲವು ಮಕ್ಕಳು ಲೈಂಗಿಕ ಕಿರುಕುಳಕ್ಕೊಳಗಾಗಿರಬಹುದೆಂದು ನೇಪಾಳದ ತನಿಖಾ ಸಂಸ್ಥೆ ಸಿಐಬಿ ಶಂಕಿಸಿದೆ.

ಕಠ್ಮಂಡುವಿನಿಂದ 60 ಕಿ.ಮೀ. ದೂರದ ಕಾವ್ರೆ ಜಿಲ್ಲೆಯಲ್ಲಿ ತಲೆಮರೆಸಿಕೊಂಡಿದ್ದ ಡಾಗ್ಲಿಶ್‌ನನ್ನು ಪೊಲೀಸರು ಬಂಧಿಸಿದ್ದಾರೆಂದು ಮೂಲಗಳು ತಿಳಿಸಿವೆ. ಆತನ ವಿರುದ್ಧ ಶಿಶುಕಾಮದ ಆರೋಪಗಳನ್ನು ಹೊರಿಸಲಾಗಿದೆ.

ಆರೋಪಿ ಡಾಲ್‌ಗ್ಲಿಶ್ ಈ ಮೊದಲು ವಿಶ್ವಸಂಸ್ಥೆಯ ಅಫ್ಘಾನ್ ನೆರವು ಸಂಸ್ಥೆ ಹ್ಯಾಬಿಟಾಟ್ ಅಫ್ಘಾನಿಸ್ತಾನದ ಪ್ರತಿನಿಧಿಯಾಗಿಯೂ ಕೆಲಸ ಮಾಡಿದ್ದನೆನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News