ನಾಳೆ ವಿಚಾರಣೆಗೆ ಹಾಜರಾಗಲಿರುವ ಝುಕರ್‌ಬರ್ಗ್

Update: 2018-04-09 18:05 GMT

ವಾಶಿಂಗ್ಟನ್,ಎ.9: ಕೇಂಬ್ರಿಜ್ ಅನಾಲಿಟಿಕಾ ಹಗರಣಕ್ಕೆ ಸಂಬಂಧಿಸಿ ಫೇಸ್‌ಬುಕ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಾರ್ಕ್ ಝುಕರ್‌ಬರ್ಗ್ ಮಂಗಳವಾರ ಅಮೆರಿಕದ ಸಂಸತ್‌ ಭವನವಾದ ಕ್ಯಾಪಿಟಲ್‌ ಹಿಲ್‌ನಲ್ಲಿ ಕಾನೂನು ನಿರೂಪಕರು ಸೇರಿದಂತೆ, ಹಗರಣದ ತನಿಖೆ ನಡೆಸುತ್ತಿರುವ ಸಮಿತಿಯ ಸದಸ್ಯರನ್ನು ಭೇಟಿಯಾಗಿ ವಿವರಣೆ ನೀಡಲಿದ್ದಾರೆ.

   2016ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಸಂದರ್ಭದಲ್ಲಿ ಟ್ರಂಪ್ ಪರವಾಗಿ ಕೆಲಸ ಮಾಡಿದ್ದ ಲಂಡನ್ ಮೂಲದ ಮಾಹಿತಿ ವಿಶ್ಲೇಷಣಾ ಸಂಸ್ಥೆಯಾದ ಕೇಂಬ್ರಿಜ್ ಅನಾಲಿಟಿಕಾ ಸಂಸ್ಥೆಯು ಲಕ್ಷಾಂತರ ಫೇಸ್‌ಬುಕ್ ಬಳಕೆದಾರರ ಖಾಸಗಿ ಮಾಹಿತಿಗಳನ್ನು ಪಡೆದುಕೊಂಡಿದೆಯೆಂಬ ಆರೋಪದ ಬಗ್ಗೆ ನಡೆಯುತ್ತಿರು ವಿಚಾರಣೆಯಲ್ಲಿ ಝುಕರ್‌ಬರ್ಗ್ ಹಾಜರಾಗಲಿದ್ದಾರೆ.

 ಈ ಹಗರಣಕ್ಕೆ ಸಂಬಂಧಿಸಿ ಝುಕರ್‌ಬರ್ಗ್ ಅವರು ಸೆನೆಟ್ ನ್ಯಾಯಾಂಗ ಹಾಗೂ ವಾಣಿಜ್ಯ ಸಮಿತಿಯ ಹಾಗೂ ಬುಧವಾರ ಅವರುಇಂಧನ ಹಾಗೂ ವಾಣಿಜ್ಯ ಸಮಿತಿಯ ವಿಚಾರಣೆಗಳಿಗೆ ಹಾಜರಾಗುವರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News