ಜಪಾನ್‌ನಲ್ಲಿ ಪ್ರಬಲ ಭೂಕಂಪ

Update: 2018-04-09 18:08 GMT

ಟೋಕಿಯೊ,ಎ.9: ಪಶ್ಚಿಮ ಜಪಾನ್‌ನಲ್ಲಿ ಸೋಮವಾರ ಮುಂಜಾನೆ ಪ್ರಬಲ ಭೂಕಂಪ ಸಂಭವಿಸಿದ್ದು, ಕನಿಷ್ಠ 5 ಮಂದಿ ಗಾಯಗೊಂಡಿದ್ದಾರೆ. ಹಾಗೂ ಹಲವಾರು ಕಟ್ಟಡಗಳು ಮತ್ತು ರಸ್ತೆಗಳು ಹಾನಿಗೀಡಾಗಿವೆ. ಭೂಕಂಪವು ರಿಕ್ಟರ್‌ಮಾಪಕದಲ್ಲಿ 5.1ರಷ್ಟು ತೀವ್ರತೆಯನ್ನು ದಾಖಲಿಸಿದ್ದು, ಮುಂಬರುವ ದಿನಗಳಲ್ಲಿ ಇದಕ್ಕಿಂತಲೂ ಪ್ರಬಲವಾದ ಭೂಕಂಪ ಸಾಧ್ಯತೆಗಳಿವೆಯೆಂದು ಹವಾಮಾನ ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಭೂಕಂಪವು ಕೇಂದ್ರ ಬಿಂದು ಹಿರೋಶಿಮಾ ನಗರದಿಂದ ಉತ್ತರಕ್ಕೆ 96 ಕಿ.ಮೀ. ದೂರದ ಹೊನ್ಶು ದ್ವೀಪದಲ್ಲಿತ್ತೆಂದು ಜಪಾನ್‌ನ ಹವಾಮಾನ ಸಂಸ್ಥೆ ತಿಳಿಸಿದೆ. ಬಲವಾದ ಭೂಕಂಪದ ಅನುಭವವಾಗಿರುವ ಪ್ರದೇಶಗಳ ಮೇಲೆ ಕಟ್ಟೆಚ್ಚರದ ನಿಗಾವಹಿಸುವ ಅಗತ್ಯವಿದೆ. ಯಾಕೆಂದರೆ ಮುಂಬರುವ ವಾರಗಳಲ್ಲಿ 5 ರಿಕ್ಟರ್ ಸ್ಕೇಲ್‌ಗಿಂತಲೂ ಅಧಿಕ ತೀವ್ರತೆಯ ಭೂಕಂಪವಾಗುವ ಸಾಧ್ಯತೆಯಿದೆಯೆಂದು ಅದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News