ಸಮುದ್ರತೀರಕ್ಕೆ ಬಂದ ಬೃಹತ್ ಗಾತ್ರದ ಮೀನನ್ನು ರಕ್ಷಿಸಿದ ಕರಾವಳಿಯ ಯುವಕರು

Update: 2018-04-10 11:16 GMT

ಮಂಗಳೂರು, ಎ.10: ಸಮುದ್ರದ ದಡಕ್ಕೆ ಬಂದು ಬಿದ್ದ ಬೃಹತ್ ಗಾತ್ರದ ಮೀನೊಂದನ್ನು ಇಬ್ಬರು ಯುವಕರು ಮತ್ತೆ ಸಮುದ್ರಕ್ಕೆ ಸೇರಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. 

ಈ ಘಟನೆ ನಡೆದದ್ದೆಲ್ಲಿ ಎನ್ನುವ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲವಾದರೂ ಬ್ಯಾರಿ ಭಾಷೆಯಲ್ಲಿ ಸ್ಥಳದಲ್ಲಿದ್ದವರು ಮಾತನಾಡುತ್ತಿರುವುದರಿಂದ ಮಂಗಳೂರಿನ ಯಾವುದಾದರೂ ಸಮುದ್ರ ತೀರ ಆಗಿರಬಹುದು ಎನ್ನಲಾಗಿದೆ.

ಸಮುದ್ರ ದಂಡೆಗೆ ಬಂದು ಬಿದ್ದು ಅಸಹಾಯಕ ಸ್ಥಿತಿಯಲ್ಲಿದ್ದ ಈ ಮೀನನ್ನು ಇಬ್ಬರು ಯುವಕರು ಕೈಯಿಂದ ತಳ್ಳುವ ಮೂಲಕ ಮತ್ತೆ ಸಮುದ್ರ ತಲುಪಿಸಿದ್ದಾರೆ. ಒಂದು ಬಾರಿ ತಳ್ಳುವ ರಭಸದಲ್ಲಿ ಮೀನು ಯುವಕನ ಮೇಲೆ ಬೀಳುವ ಹಾಗಿದ್ದಾಗ, ಮಹಿಳೆಯರು ಬ್ಯಾರಿ ಭಾಷೆಯಲ್ಲಿ ಬೊಬ್ಬಿಡುವುದೂ ಕೇಳಿಸುತ್ತದೆ.

ನೋಡಲು ಅಪಾಯಕಾರಿಯಂತೆ ಕಾಣಿಸುವ ಈ ಮೀನು ಸಮುದ್ರದಂಡೆಗೆ ಬಂದು ಬಿದ್ದದ್ದರಿಂದ ಅಸಹಾಯಕ ಸ್ಥಿತಿಯಲ್ಲಿತ್ತು. ಬರೀ ಕೈಯಲ್ಲಿ ಮೀನನ್ನು ದೂಡಿ ಮತ್ತೆ ಸಮುದ್ರಕ್ಕೆ ತಲುಪಿಸಿದ ಈ ಯುವಕರ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ. ಯುವಕರ ಈ ಸಾಹಸದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಯಾರೋ ಪೋಸ್ಟ್ ಮಾಡಿದ್ದು, ವೈರಲ್ ಆಗುತ್ತಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News