×
Ad

ಎ.13: ಬಿಐಟಿ, ಬೀಡ್ಸ್ ನಿಂದ 'ಟ್ಯಾಲೆಂಟ್ ಹಂಟ್ 2018'

Update: 2018-04-10 20:25 IST

ಮಂಗಳೂರು, ಎ.10: ಬ್ಯಾರೀಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಬಿಟ್ಸ್) ಮತ್ತು ಬ್ಯಾರೀಸ್ ಎನ್‌ವಿರೊ ಆರ್ಕಿಟೆಕ್ಚರ್ ಡಿಸೈನ್ ಸ್ಕೂಲ್ (ಬೀಡ್ಸ್) ಜೊತೆಯಾಗಿ 2018ರ ಸಾಲಿನಲ್ಲಿ ಇಂಜಿನಿಯರಿಂಗ್ ಅಥವಾ ಆರ್ಕಿಟೆಕ್ಚರ್ ವ್ಯಾಸಂಗ ಮಾಡಲು ಬಯಸಿರುವ ವಿದ್ಯಾರ್ಥಿಗಳಿಗಾಗಿ ಪ್ರತಿಭಾನ್ವೇಷಣೆ ಪರೀಕ್ಷೆಯನ್ನು ಆಯೋಜಿಸಿದೆ.

ಎ.13ರಂದು ಬೆಳಗ್ಗೆ 9 ಗಂಟೆಗೆ ಇನೊಳಿಯಲ್ಲಿರುವ ಬ್ಯಾರೀಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ 'ಪ್ರತಿಭಾನ್ವೇಷಣೆ-2018' ನಡೆಯಲಿದೆ. ಈ ಪ್ರತಿಭಾನ್ವೇಷಣೆ ಪರೀಕ್ಷೆಯಲ್ಲಿ ತೋರಿಸುವ ಪ್ರದರ್ಶನದ ಆಧಾರದಲ್ಲಿ ಸಮಾಜದಲ್ಲಿರುವ ಅರ್ಹ ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಶೇ.100 ರವರೆಗೆ ವಿದ್ಯಾರ್ಥಿ ವೇತನ ನೀಡಲಾಗುವುದು. ದ್ವಿತೀಯ ಪಿಯುಸಿ ವಿಜ್ಞಾನ ಪರೀಕ್ಷೆ ಬರೆದಿರುವ ಕರ್ನಾಟಕ ಮತ್ತು ಕಾಸರಗೋಡು ಜಿಲ್ಲೆಯ ವಿದ್ಯಾರ್ಥಿಗಳು ಈ ಪರೀಕ್ಷೆಯಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ.

ಸ್ಥಳದಲ್ಲೇ ನೋಂದಾಯಿಸಿಕೊಳ್ಳಲು ಅವಕಾಶವಿದೆ. ವಿದ್ಯಾರ್ಥಿಗಳು ತಮ್ಮ ಹತ್ತನೇ ತರಗತಿ ಅಂಕಪಟ್ಟಿ, ಕಾಲೇಜು ಗುರುತುಪತ್ರ ಮತ್ತು ಪಾಸ್‌ಪೋರ್ಟ್ ಗಾತ್ರದ ಫೋಟೊ ಜೊತೆ ಆಗಮಿಸಬೇಕು.

ನೋಂದಣಿಗಾಗಿ ಬಿಐಟಿ ಮತ್ತು ಬೀಡ್ಸ್ ಇದರ ಮುಖ್ಯಸ್ಥರಾದ ಪ್ರೊ. ಮುಸ್ತಫಾ ಬಸ್ತಿಕೋಡಿ ಮೊ. ಸಂ. 7259668844, 7259773300 Email: mustafa@bitmangalore.edu.in ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News