ಉಡುಪಿ: ಎ.16ರಿಂದ ಸಂಗೀತ ರಸಗ್ರಹಣ ಶಿಬಿರ
ಉಡುಪಿ, ಎ.10: ಕನಕದಾಸ ಅಧ್ಯಯನ ಸಂಶೋಧನ ಪೀಠ ಉಡುಪಿ, ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜ್ಯುಕೇಶನ್ ಹಾಗೂ ಸರಿಗಮ ಭಾರತಿ ಸಂಗೀತ ವಿದ್ಯಾಲಯ ಪರ್ಕಳ ಇವುಗಳ ಸಂಯುಕ್ತ ಆಶ್ರಯದಲ್ಲಿ ಕನಕದಾಸ ಕೀರ್ತನ ಮತ್ತು ಸಂಗೀತ ರಸಗ್ರಹಣ ಶಿಬಿರವೊಂದನ್ನು ಎ.16 ಮತ್ತು 17ರಂದು ಎಂ.ಜಿ.ಎಂ ಕಾಲೇಜಿನ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಶಿಬಿರವು ಬೆಳಗ್ಗೆ 9 ರಿಂದ ಸಂಜೆ 5 ರವರೆಗೆ ಆರ್‌ಆರ್‌ಸಿ ಕಟ್ಟಡದಲ್ಲಿ ನಡೆಯಲಿದೆ. ಬೆಂಗಳೂರಿನ ಖ್ಯಾತ ಗಾಯಕಿ ವಾಣಿ ಸತೀಶ್ ಶಿಬಿರವನ್ನು ನಡೆಸಿಕೊಡಲಿದ್ದಾರೆ.
ಎ.16ರ ಬೆಳಗ್ಗೆ 9 ಗಂಟೆಗೆ ಶಿಬಿರವನ್ನು ಸಾಹಿತಿ ಪ್ರೊ. ಮೇಟಿ ಮುದಿಯಪ್ಪ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಣಿಪಾಲ ಅಕಾಡೆಮಿ ಆಫ್ ಜನರಲ್‌ಎಜ್ಯುಕೇಷನ್‌ನ ಆಡಳಿತಾಧಿಕಾರಿ ಡಾ.ಎಚ್. ಶಾಂತಾರಾಮ್, ಬೆಂಗಳೂರಿನ ಸಂಗೀತ ವಿದುಷಿ ವಾಣಿ ಸತೀಶ್ ಪಾಲ್ಗೊಳ್ಳು ವರು. ಅಧ್ಯಕ್ಷತೆಯನ್ನು ಹಿರಿಯ ವಿಮರ್ಶಕ ಎ.ಈಶ್ವರಯ್ಯ ವಹಿಸುವರು. ಉದ್ಘಾಟನೆಯ ಬಳಿ ಸಂಗೀತ ಶಿಬಿರ ಆರಂಭಗೊಳ್ಳಲಿದೆ.
ಅದೇ ದಿನ ಅಪರಾಹ್ನ 3 ಕ್ಕೆ ಸರೋಜಾ ಆಚಾರ್ಯರಿಂದ ಸಂಗೀತ ಕಲಿಕೆ ಎನ್ನುವ ವಿಷಯದ ಕುರಿತು ವಿಶೇಷ ಉಪನ್ಯಾಸ ನಡೆಯಲಿದೆ. 4 ಕ್ಕೆ ವಾಣಿ ಸತೀಶ್‌ರಿಂದ ಸಂಗೀತ ಕಚೇರಿ ನಡೆಯಲಿದೆ. ಎ.17ರಂದು ಸಮಾರೋಪ ಸಮಾರಂಭ ಹಾಗೂ ಶಿಬಿರಾರ್ಥಿಗಳಿಂದ ಹಾಡುಗಾರಿಕೆ ನಡೆಯಲಿದೆ. ಸಂಜೆ 4:15ಕ್ಕೆ ಮುಖ್ಯ ಅತಿಥಿಗಳಾಗಿ ಪ್ರತಿಭಾ ಎಂ.ಎಲ್ ಸಾಮಗ ಭಾಗವಹಿಸಲಿದ್ದು, ಡಾ.ಎನ್.ತಿರುಮಲೇಶ್ವರ ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ.
ಈ ಕುರಿತು ಹೆಚ್ಚಿನ ಮಾಹಿತಿಗಳಿಗೆ ದೂರವಾಣಿ ಸಂಖ್ಯೆ: 9964140601, 9481355606ನ್ನು ಸಂಪರ್ಕಿಸುವಂತೆ ಕೇಂದ್ರದ ಪ್ರಕಟಣೆ ತಿಳಿಸಿದೆ.