ಸೂಚಿಸಿರದ ಔಷಧಿಗಳನ್ನು ಮಿತಿಮೀರಿ ಸೇವಿಸಿದ್ದು ಇಂದ್ರಾಣಿ ಅಸ್ವಸ್ತತೆಗೆ ಕಾರಣ

Update: 2018-04-10 16:13 GMT

ಮುಂಬೈ, ಎ.10: ತನ್ನ ಪುತ್ರಿ ಶೀನಾ ಬೋರಾ ಕೊಲೆ ಆರೋಪದಲ್ಲಿ ಜೈಲು ಸೇರಿರುವ ಇಂದ್ರಾಣಿ ಮುಖರ್ಜಿ ತನಗೆ ವೈದ್ಯರು ಸೂಚಿಸಿರದಿದ್ದ ಖಿನ್ನತೆ ನಿವಾರಕ ಔಷಧಿಗಳನ್ನು ಮಿತಿಮೀರಿದ ಪ್ರಮಾಣದಲ್ಲಿ ಸೇವಿಸಿದ್ದು, ಆಕೆಯ ಅಸ್ವಸ್ಥತೆಗೆ ಕಾರಣವಾಗಿತ್ತು ಎಂದು ವಿಧಿವಿಜ್ಞಾನ ಪ್ರಯೋಗಾಲಯಗಳ ವರದಿಗಳನ್ನು ಉಲ್ಲೇಖಿಸಿ ಇಲ್ಲಿಯ ಜೆ.ಜೆ.ಆಸ್ಪತ್ರೆಯು ತಿಳಿಸಿದೆ.

ಇಂದ್ರಾಣಿಯನ್ನು ಶುಕ್ರವಾರ ಅರೆ ಪ್ರಜ್ಞಾವಸ್ಥೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಇಂದ್ರಾಣಿಗೆ ಖಿನ್ನತೆ ನಿವಾರಕವಾಗಿ ಅಮಿಟ್ರೈಪ್ಟಿಲಿನ್ ಅನ್ನು ಸೂಚಿಸಲಾಗಿತ್ತು. ಆದರೆ ಆಕೆ ಬೆಂರೊಡಯಾಝೆಪೈನ್‌ನ್ನು ಅತಿಯಾದ ಪ್ರಮಾಣದಲ್ಲಿ ಸೇವಿಸಿದ್ದು ಮೂತ್ರ ಪರೀಕ್ಷೆಯಿಂದ ಬೆಳಕಿಗೆ ಬಂದಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದರು.

ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ವೈದ್ಯರು ಔಷಧಿಗಳನ್ನು ಸೂಚಿಸುತ್ತಾರೆ,ಆದರೆ ಅದನ್ನು ರೋಗಿಗೆ ನೀಡುವ ಹೊಣೆ ಸದಾ ಜೈಲು ಸಿಬ್ಬಂದಿಗಳದ್ದಾಗಿರುತ್ತದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News