ಬಂಟ್ವಾಳ: ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿಗೆ
Update: 2018-04-10 23:06 IST
ಬಂಡ್ವಾಳ, ಎ. 10: ಬಂಟ್ವಾಳ ಪುರಸಭಾ ವ್ಯಾಪ್ತಿಯ ಪಾಣೆಮಂಗಳೂರು ಗ್ರಾಮದ ಪ್ರಮುಖ ಕಾಂಗ್ರೆಸ್ ಕಾರ್ಯಕರ್ತರು ಮಂಗಳವಾರ ಬಿಜೆಪಿಗೆ ಸೇರ್ಪಡೆಯಾದರು.
ಕಾಂಗ್ರೆಸ್ ಕಾರ್ಯಕರ್ತರಾದ ಬಾಬು ಆಚಾರ್ಯ, ದಿವಾಕರ ಪ್ರಭು, ರಮೇಶ್ ಪ್ರಭು, ವಿಶ್ವನಾಥ ಬೋಳಂಗಡಿ, ಲಕ್ಷ್ಮಣ ಆಚಾರ್ಯ ಮೆಲ್ಕಾರ್, ವಿಶ್ವನಾಥ ಮೂಲ್ಯ, ಮೋಹನ್ ಬಸ್ತಿಕೋಡಿ, ಕುಮಾರ್ ಪೂಜಾರಿ ಬಿಜೆಪಿ ಮುಖಂಡ ರಾಜೇಶ್ ನಾಕ್ ಉಳಿಪ್ಪಾಡಿಗುತ್ತು ಅವರ ನೇತೃತ್ವದಲ್ಲಿ ಬಿಜೆಪಿಗೆ ಸೇರ್ಪಡೆಯಾದರು. ಈ ಸಂದರ್ಭದಲ್ಲಿ ಬಿ.ದೇವದಾಸ ಶೆಟ್ಟಿ, ಸುದರ್ಶನ್ ಮೆಲ್ಕಾರ್, ಸಚಿನ್ ಮೆಲ್ಕಾರ್ ಉಪಸ್ಥಿತರಿದ್ದರು.