ವಿಯೆಟ್ನಾಂನಲ್ಲಿ ಕಮ್ಯುನಿಸ್ಟ್ ಸರಕಾರದೊಂದಿಗೆ ಫೇಸ್‌ಬುಕ್ ಶಾಮೀಲು

Update: 2018-04-10 18:13 GMT

ಹನೋಯ್ (ವಿಯೆಟ್ನಾಂ), ಎ. 10: ಆನ್‌ಲೈನ್ ಭಿನ್ನಮತವನ್ನು ಹತ್ತಿಕ್ಕುವಲ್ಲಿ ಫೇಸ್‌ಬುಕ್, ವಿಯೆಟ್ನಾಂನ ಕಮ್ಯುನಿಸ್ಟ್ ಆಡಳಿತದೊಂದಿಗೆ ಶಾಮೀಲಾಗಿರಬಹುದು ಎಂಬ ಸಂಶಯವನ್ನು ವ್ಯಕ್ತಪಡಿಸಿ ಆ ದೇಶದ 50 ಸಾಮಾಜಿಕ ಹೋರಾಟಗಾರರು ಮತ್ತು ಮಾನವಹಕ್ಕು ಸಂಘಟನೆಗಳು ಫೇಸ್‌ಬುಕ್ ಮುಖ್ಯಸ್ಥ ಮಾರ್ಕ್ ಝುಕರ್‌ಬರ್ಗ್‌ರಿಗೆ ಬಹಿರಂಗ ಪತ್ರವೊಂದನ್ನು ಬರೆದಿದ್ದಾರೆ.

 ಫೇಸ್‌ಬುಕ್ ಬಳಕೆದಾರರ ಸಂಖ್ಯೆಯ ಆಧಾರದಲ್ಲಿ ಹೇಳುವುದಾದರೆ, ವಿಯೆಟ್ನಾಂ 10ನೆ ಸ್ಥಾನದಲ್ಲಿದೆ. ಏಕ ಪಕ್ಷದ ಆಡಳಿತದ ವಿಯೆಟ್ನಾಂನ ಭಿನ್ನಮತೀಯರಲ್ಲಿ ಫೇಸ್‌ಬುಕ್ ಭಾರೀ ಜನಪ್ರಿಯವಾಗಿದೆ. ವಿಯೆಟ್ನಾಂನಲ್ಲಿ ಸ್ವತಂತ್ರ ಮಾಧ್ಯಮವನ್ನು ನಿಷೇಧಿಸಲಾಗಿದೆ ಹಾಗೂ ಬ್ಲಾಗ್‌ಸೈಟ್‌ಗಳನ್ನು ನಿಯಮಿತವಾಗಿ ತೆಗೆಯಲಾಗುತ್ತಿದೆ.

ಫೇಸ್‌ಬುಕ್ ಖಾತೆಗಳ ಸ್ತಂಭನ ಮತ್ತು ಬರಹಗಳನ್ನು ಅಳಿಸಿಹಾಕುವ ಪ್ರಕರಣಗಳು ಕಳೆದ ವರ್ಷದಿಂದ ಹೆಚ್ಚುತ್ತಿವೆ ಎಂದು ಪತ್ರದಲ್ಲಿ ಹೇಳಲಾಗಿದೆ.

ಮಾನವಹಕ್ಕು ಸಂಘಟನೆಗಳು, ಹೋರಾಟಗಾರರು ಮತ್ತು ಬ್ಲಾಗರ್‌ಗಳು ಸೇರಿದಂತೆ 50 ವ್ಯಕ್ತಿಗಳು ಹಾಗೂ ಸಂಘಟನೆಗಳು ಪತ್ರಕ್ಕೆ ಸಹಿ ಹಾಕಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News