ಬಿ.ಸಿ.ರೋಡ್: ಪತ್ರಕರ್ತರ ಸಂಘದ ಸಮಾಲೋಚನಾ ಸಭೆ
ಬಂಟ್ವಾಳ, ಎ. 10: ಮುಂಬರುವ ವಿಧಾನಸಭಾ ಚುನಾವಣೆ ಮತ್ತು ಮತ ಎಣಿಕೆ ಮತ್ತಿತರ ಸಂದರ್ಭದಲ್ಲಿ ಪತ್ರಕರ್ತರು ಯಶಸ್ವಿಯಾಗಿ ಕರ್ತವ್ಯ ನಿರ್ವಹಿಸಲು ಅನುಕೂಲವಾಗುವಂತೆ ಜಿಲ್ಲಾಧಿಕಾರಿ ಮೂಲಕ ವಿಶೇಷ ಗುರುತಿನ ಚೀಟಿ ಪಡೆದುಕೊಳ್ಳಬೇಕು ಎಂದು ಕರ್ನಾಟಕ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಸುದೇಶ್ ಕುಮಾರ್ ಹೇಳಿದ್ದಾರೆ.
ಬಿ.ಸಿ.ರೋಡಿನ ಪ್ರೆಸ್‌ಕ್ಲಬ್ಬಿನಲ್ಲಿ ಸಂಘದ ಅಧ್ಯಕ್ಷ ಮೋಹನ್ ಕೆ.ಶ್ರೀಯಾನ್ ರಾಯಿ ಅಧ್ಯಕ್ಷತೆಯಲ್ಲಿ ಮಂಗಳವಾರ ಸಂಜೆ ನಡೆದ ಪತ್ರಕರ್ತರ ಸಮಾ ಲೋಚನಾ ಸಭೆಯಲ್ಲಿ ಅವರು ಮಾತನಾಡಿದರು. ವಿಮಾ ಭದ್ರತೆ ಜೊತೆಗೆ ರಾಜ್ಯ ಮತ್ತು ರಾಷ್ಟ್ರೀಯ ಪತ್ರಕರ್ತರ ಯೂನಿಯನ್ ಮಾನ್ಯತೆ ಹೊಂದಿರುವ ಸಂಘದ ಅಧಿಕೃತ ಗುರುತಿನ ಚೀಟಿ ಪುನರ್ ನವೀಕರಣಗೊಳಿಸುವಂತೆ ಅವರು ಸಲಹೆ ನೀಡಿದರು.
ಸಂಘದ ಜಿಲ್ಲಾ ಸದಸ್ಯ ದತ್ತಾತ್ರೇಯ ಹೆಗ್ಡೆ ಮಾತನಾಡಿ, ರಾಜ್ಯ ಮಾಧ್ಯಮ ಅಕಾಡೆಮಿ ಸಹಭಾಗಿತ್ವದಲ್ಲಿ ಜನಪರ ಕಾರ್ಯಕ್ರಮ ಆಯೋಜಿಸುವುದಾಗಿ ತಿಳಿಸಿದರು. ಇದೇ ವೇಳೆ ಸಂಘದ ನೂತನ ಸದಸ್ಯರಾಗಿ ಹಿರಿಯ ಪತ್ರಕರ್ತ ಗೋಪಾಲ ಅಂಚನ್ ಮತ್ತು ಪುನೀತ್ ಸಿದ್ಧಕಟ್ಟೆ ಸೇರ್ಪಡೆಗೊಂಡರು.
ಸಂಘದ ಪದಾಧಿಕಾರಿಗಳಾದ ಫಾರೂಕ್ ಗೂಡಿನಬಳಿ, ವಿಶ್ವನಾಥ ಬಂಟ್ವಾಳ, ಆಶ್ರಫ್ ಪಾಣೆಮಂಗಳೂರು, ಬಾಲಕೃಷ್ಣ ಕಲ್ಲಡ್ಕ, ಯು.ಮುಸ್ತಾಫ, ಇರ್ಫಾನ್ ನೆಹರೂನಗರ, ಪತ್ರಿಕಾ ಛಾಯಾಗ್ರಾಹಕ ಸತೀಶ್ ಕುಮಾರ್ ಮತ್ತಿತರರು ಇದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ಲತೀಫ್ ನೇರಳಕಟ್ಟೆ ಸ್ವಾಗತಿಸಿ, ವಂದಿಸಿದರು.