×
Ad

ಇನೋಳಿ: ಬಿಸೈಟ್ ಮದರಸದಲ್ಲಿ ಜಲದಿನ ಅಭಿಯಾನಕ್ಕೆ ಚಾಲನೆ

Update: 2018-04-11 17:07 IST

ಕೊಣಾಜೆ, ಎ. 11: ನೀರು ಪ್ರತಿಯೊಬ್ಬನಿಗೂ ಅತ್ಯಗತ್ಯವಾಗಿದೆ, ಆಹಾರ ಇಲ್ಲದೆ ಮನುಷ್ಯ ಬದುಕಬಹುದಾದರೂ ನೀರಿಲ್ಲದೆ ಬದುಕಲಾಗದು, ಇಂತಹ ಜೀವಜಲ ದುರುಪಯೋಗಪಡಿಸಿದಲ್ಲಿ ದೇವನ ಬಳಿ ಘೋರ ವಿಚಾರಣೆ ಎದುರಿಸಬೇಕಾಗುತ್ತದೆ ಎಂದು ಇನೋಳಿ ಬಿಸೈಟ್ ಮದರಸದ ಅಧ್ಯಾಪಕ ಅಶ್ರಫ್ ಮುಸ್ಲಿಯಾರ್ ಅಭಿಪ್ರಾಯಪಟ್ಟರು.

ದೇರಳಕಟ್ಟೆ ರೇಂಜ್ ಸಮಸ್ತ ಕೇರಳ ಸುನ್ನೀ ಬಾಲವೇದಿ ಇದರ ವತಿಯಿಂದ ಎರಡು ತಿಂಗಳ ಜಲದಿನ ಅಭಿಯಾನಕ್ಕೆ ಇನೋಳಿ ಬಿಸೈಟ್ ಹಿದಾಯತುಲ್ ಇಸ್ಲಾಂ ಮದರಸದಲ್ಲಿ ಬುಧವಾರ ಚಾಲನೆ ನೀಡಿ ಮಾತನಾಡಿದರು.

ಬೇಸಿಗೆ ಸಂದರ್ಭ ನೀರಿನ ಸಮಸ್ಯೆ ಸಾಮಾನ್ಯ, ಈ ನಿಟ್ಟಿನಲ್ಲಿ ಮಳೆಗಾಲದಲ್ಲೇ ಹರಿಯುವ ನೀರು ಸಂರಕ್ಷಿಸುವ ಯೋಜನೆಗಳು ಬಂದಿದ್ದು, ಇದರ ಬಗ್ಗೆ ತಿಳಿದುಕೊಳ್ಳುವುದು ಮುಖ್ಯ. ಮಸೀದಿಯಲ್ಲಿ ನಮಾಝ್ ಸಂದರ್ಭ ಅಂಗಶುದ್ಧಿಗೂ ಕನಿಷ್ಟ ನೀರು ಬಳಸಿ ದುರುಪಯೋಗವಾಗದಂತೆ ನೋಡಿಕೊಳ್ಳಬೇಕು ಎಂದು ಇಸ್ಲಾಂ ಕಲ್ಪಿಸಿದೆ ಎಂದು ಹೇಳಿದರು.

ಮದರಸ ಅಧ್ಯಕ್ಷ ಟಿ.ಎಚ್.ನಝೀರ್, ಪ್ರಧಾನ ಕಾರ್ಯದರ್ಶಿ ಹುಸೈನ್ ಬಾವು, ಇನೋಳಿ ಜಾಮಿಯಾ ಮುಬಾರಕ್ ಮಸೀದಿ ಸದಸ್ಯ ಅಕ್ರಂ ಇನೋಳಿ, ಪದಾಧಿಕಾರಿಗಳಾದ ಅಬ್ದುಲ್ ರಝಾಕ್, ಅಬೂಬಕರ್, ಅಬ್ದುಲ್ ಕರೀಂ, ಇಸ್ಮಾಯಿಲ್ ಮೊದಲಾದವರು ಉಪಸ್ಥಿತರಿದ್ದರು.

‘ಓರ್ವ ವ್ಯಕ್ತಿ ಬಾಯಾರಿದವನಿಗೆ ನೀರು ಕುಡಿಸಿದಲ್ಲಿ ಆತನ ಪಾಪ ಪರಿಹಾರಗೊಳ್ಳಲು ಸಾಧ್ಯ, ಪಾಪ ಮಾಡಿದ್ದ ಮಹಿಳೆಯೋರ್ವರು ಬಾಯಾರಿದ ಪ್ರಾಣಿಯೊಂದಕ್ಕೆ ನೀರು ಕುಡಿಸಿದ ಫಲವಾಗಿ ಆಕೆ ಪಾಪಮುಕ್ತಗೊಂಡ ಬಗ್ಗೆ ಹದೀಸ್‌ನಲ್ಲಿದ್ದು ನೀರಿನ ಮಹತ್ವ ತಿಳಿಯುತ್ತದೆ’

- ಅಶ್ರಫ್ ಮುಸ್ಲಿಯಾರ್, ಮದರಸ ಪ್ರಾಧ್ಯಾಪಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News