ಹನುಮಾನ್ ಕಂಪೆನಿಯ ವಿರುದ್ಧ ಕಾರ್ಮಿಕರ ಧರಣಿ
ಉಡುಪಿ, ಎ.11: ಚಿಟ್ಪಾಡಿ ಹನುಮಾನ್ ಟ್ರಾನ್ಸ್‌ಪೋರ್ಟ್ ಕಂಪೆನಿಯ ಕಾರ್ಮಿಕ ವಿರೋಧಿ ನೀತಿಯನ್ನು ಖಂಡಿಸಿ ಹನುಮಾನ್ ಟ್ರಾನ್ಸ್‌ಪೋರ್ಟ್ ಕಂಪೆನಿಯ ನೌಕರರ ಸಂಘವು ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಎದುರು ನಡೆಸುತ್ತಿರುವ ಧರಣಿ ಸತ್ಯಾಗ್ರಹವು ಮೂರನೇ ದಿನವಾದ ಬುಧ ವಾರವೂ ಮುಂದುವರಿದಿದೆ.
ಹನುಮಾನ್ ಟ್ರಾನ್ಸ್‌ಪೋರ್ಟ್ ಕಂಪೆನಿಯ ಆಡಳಿತ ನಿರ್ದೇಶಕ ವಿಲಾಸ್ ನಾಯಕ್ ತನ್ನ ಶ್ರೀಮಂತಿಕೆಯ ದರ್ಪವನ್ನು ಬಡ ಕಾರ್ಮಿಕರ ಮೇಲೆ ತೋರು ತ್ತಿರುವುದಾಗಿ ಆರೋಪಿಸಿ ಸಂಘದ ನೇತೃತ್ವದಲ್ಲಿ ಕಂಪೆನಿಯ ಕಾರ್ಮಿಕರು ಎ.9ರಿಂದ ಈ ಧರಣಿ ಸತ್ಯಾಗ್ರಹವನ್ನು ನಡೆಸುತ್ತಿದ್ದಾರೆ.
ಕಾರ್ಮಿಕರ ತಿಂಗಳ ವೇತನ ವಿಳಂಬವಾಗಿ ಪಾವತಿಸುತ್ತಿದ್ದು, ವೇತನ ಹಾಗೂ ತುಟ್ಟಿ ಭತ್ಯೆ ಕೇಳುವ ಕಾರ್ಮಿಕರ ಮೇಲೆ ಹಲ್ಲೆ ನಡೆಸಲಾಗುತ್ತಿದೆ. ಅಲ್ಲದೆ ಕಾರ್ಮಿಕರನ್ನು ಅಮಾನತು ಹಾಗೂ ವಜಾ ಮಾಡುವ ಮೂಲಕ ಕಾರ್ಮಿಕ ವಿರೋಧಿ ನೀತಿಯನ್ನು ಅನುಸರಿಸುತ್ತಿದ್ದಾರೆ ಎಂದು ಸಂಘದ ಅಧ್ಯಕ್ಷ ರಾಜಾಸಾಬ್ ಎಚ್.ನಂದಿಹಳ್ಳಿ ಆರೋಪಿಸಿದ್ದಾರೆ.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ರವಿಚಂದ್ರ ಕೆ.ಎಸ್., ಕಾರ್ಯದರ್ಶಿ ಚಂದ್ರಶೇಖರ್ ಮೂಡಬೆಟ್ಟು, ಖಜಾಂಚಿ ಜಿ.ನಾಗರಾಜ್, ಸಹ ಕಾರ್ಯ ದರ್ಶಿ ಸತೀಶ್ ಎಚ್.ಜಿ., ಶೈಲೇಂದ್ರ ಶೆಟ್ಟಿ, ಮೋಹನ್ ಬಿ.ಎಸ್., ರಿಚರ್ಡ್, ದೇವರಾಜ ಎಂ.ಎನ್., ಸಂಜೀವ್ ಶೆಟ್ಟಿ, ಬಿ.ನಾಗರಾಜ್ ಮೊದಲಾದವರು ಉಪಸ್ಥಿತರಿದ್ದರು.