×
Ad

ಯುಪಿಸಿಎಲ್: 2158 ಮಂದಿಗೆ 76 ಲಕ್ಷ ರೂ. ಮೊತ್ತದ ವಿದ್ಯಾರ್ಥಿವೇತನ ವಿತರಣೆ

Update: 2018-04-11 20:13 IST

ಪಡುಬಿದ್ರೆ, ಎ.11: ನಂದಿಕೂರು ಯುಪಿಸಿಎಲ್ ಸಂಸ್ಥೆಯು ಅದಾನಿ ಪ್ರತಿ ಷ್ಠಾನದ ವತಿಯಿಂದ ಸಿಎಸ್‌ಆರ್ ಯೋಜನೆಯಡಿ ಸ್ಥಾವರದ ಸುತ್ತಮುತ್ತಲಿನ 2158 ಪ್ರತಿಭಾವಂತ ವಿದ್ಯಾರ್ಥಿಗಳಿಗೆ 76ಲಕ್ಷ ರೂ.ಮೊತ್ತದ ವಿದ್ಯಾರ್ಥಿವೇತನ ವನ್ನು ಇತ್ತೀಚೆಗೆ ಮುದರಂಗಡಿ ಸಂತ ಫ್ರಾನ್ಸೀಸ್ ಕ್ಸೇವಿಯರ್ ಚರ್ಚ್ ವಠಾರದಲ್ಲಿ ವಿತರಿಸಲಾಯಿತು.

ಯುಪಿಸಿಎಲ್ ಸಂಸ್ಥೆಯ ಜಂಟಿ ಅಧ್ಯಕ್ಷ ಕಿಶೋರ್ ಆಳ್ವ ಮಾತನಾಡಿ, 2016-17ನೇ ಶೈಕ್ಷಣಿಕ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿ, ಐಟಿಐ, ಡಿಪ್ಲೊಮಾ, ಪದವಿ, ಸ್ನಾತಕೋತ್ತರ ಪದವಿ, ಎಂಜಿನಿಯರಿಂಗ್ ಮತ್ತು ವೈದ್ಯ ಕೀಯ ಕ್ಷೇತ್ರದಲ್ಲಿ ಶೇ.80ಕ್ಕಿಂತ ಅಧಿಕ ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಸ್ಥಾವರದ ಆಸುಪಾಸಿನ ಪಂಚಾಯತ್‌ಗಳ ಮೂಲಕ ಗುರುತಿಸಿ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತಿದೆ. ಅಲ್ಲದೆ ಸುಮಾರು 70 ಸರಕಾರಿ ಮತ್ತು ಅನುದಾನಿತ ಶಾಲೆಗಳ 5ರಿಂದ 9ನೇ ತರಗತಿಯವರೆಗಿನ ಪ್ರಥಮ ಹಾಗೂ ದ್ವಿತಿಯರ್ಯಾಂಕ್ ಪಡೆದ ವಿದ್ಯಾರ್ಥಿಗಳಿಗೂ ವಿದ್ಯಾರ್ಥಿವೇತನ ನೀಡಲಾಗುತ್ತಿದೆ ಎಂದರು.

ಕಾರ್ಯಕ್ರಮವನ್ನು ಚರ್ಚ್‌ನ ಧರ್ಮಗುರು ರೆ.ಫಾ.ಕ್ಸೇವಿಯರ್ ಲೇವಿಸ್ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ನಿವೃತ್ತ ಶಿಕ್ಷಕ ಪುಂಡಲೀಕ ಮರಾಠೆ, ಸಂತ ಫ್ರಾನ್ಸೀಸ್ ಕ್ಸೇವಿಯರ್ ಶಾಲೆಯ ಮುಖ್ಯೋಪಾಧ್ಯಾಯಿನಿ ಜೆಸಿಂತ ಮೆಂಡೋನ್ಸ ಮಾತನಾಡಿದರು.

ವಿದ್ಯಾರ್ಥಿವೇತನದ ಮಾಹಿತಿಯನ್ನು ಯುಪಿಸಿಎಲ್ ಸಂಸ್ಥೆಯ ಏಜಿಎಂ ಗಿರೀಶ್ ನಾವಡ ನೀಡಿದರು. ಹಿರಿಯ ಪ್ರಬಂಧಕ ರವಿ ಆರ್.ಜೇರೆ ಸ್ವಾಗತಿಸಿ ವಂದಿಸಿದರು. ಸಂತ ಫ್ರಾನ್ಸೀಸ್ ಕ್ಸೇವಿಯರ್ ಶಾಲೆಯ ಶಿಕ್ಷಕ ಚಂದ್ರಹಾಸ ಪ್ರಭು ಕಾರ್ಯ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News