×
Ad

ಕೊರಗ ಸಮುದಾಯದ ಕ್ರಿಕೆಟ್: ಫ್ರೆಂಡ್ಸ್ ಪುತ್ತೂರುಗೆ ಟ್ರೋಫಿ

Update: 2018-04-11 20:14 IST

ಉಡುಪಿ, ಎ.11: ಚಿಟ್ಪಾಡಿ ಬಾಯ್ಸಾ ಕ್ರಿಕೆಟರ್ಸ್‌ ವತಿಯಿಂದ ಉಡುಪಿ ಬೀಡಿನಗುಡ್ಡೆ ಮೈದಾನದಲ್ಲಿ ಇತ್ತೀಚೆಗೆ ಕೊರಗ ಸಮುದಾಯವರಿಗಾಗಿ ಏರ್ಪಡಿಸಲಾದ ಅವಿಜಿತ ದ.ಕ. ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾಟದಲ್ಲಿ ಫ್ರೆಂಡ್ಸ್ ಪುತ್ತೂರು ತಂಡ 22,222ರೂ. ನಗದು ಹಾಗೂ ಬಾಯ್ಸ್ ಟ್ರೋಫಿ ಯನ್ನು ಗೆದ್ದುಕೊಂಡಿದೆ.

ನಸೀಬ್ ಬೀಡಿನಗುಡ್ಡೆ ತಂಡವು 11,111 ರೂ. ನಗದು ಬಹುಮಾನ ದೊಂದಿಗೆ ರನ್ನರ್ಸ್‌ ಪ್ರಶಸ್ತಿ ಪಡೆದುಕೊಂಡಿತು. ಪಂದ್ಯಾಟದ ಬೆಸ್ಟ್ ಬ್ಯಾಟ್ಸ್‌ಮನ್ ಮತ್ತು ಸರಣಿ ಶ್ರೇಷ್ಟ ಪ್ರಶಸ್ತಿಯನ್ನು ನಸೀಬ್ ತಂಡದ ಅರ್ಜುನ್, ಬೆಸ್ಟ್ ಬೌಲರ್ ಪ್ರಶಸ್ತಿಯನ್ನು ಫ್ರೆಂಡ್ಸ್ ಪುತ್ತೂರು ತಂಡದ ಸಂದೀಪ್, ಬೆಸ್ಟ್ ವಿಕೆಟ್ ಕೀಪರ್ ಪ್ರಶಸ್ತಿಯು ಫ್ರೆಂಡ್ಸ್ ಪುತ್ತೂರಿನ ರಾಜೇಶ್, ಪೈನಲ್ ಪಂದ್ಯಾಟದ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಫ್ರೆಂಡ್ಸ್ ಪುತ್ತೂರಿನ ವಿಶಾಲ್ ಪಡೆದು ಕೊಂಡರು.

ಸಮಾರೋಪ ಸಮಾರಂಭದಲ್ಲಿ ಯುವ ವಕೀಲ ಅಸದುಲ್ಲಾ ಕಟಪಾಡಿ ಮತ್ತು ಉದ್ಯಮಿ ಶಕೀಲ್ ಪ್ರಶಸ್ತಿ ವಿತರಿಸಿದರು. ಪ್ರತಿಭಾವಂತ ಆಟಗಾರರಾದ ಅರ್ಜುನ್, ಅವಿನಾಶ್, ಸಂದೀಪ್, ಪ್ರಸಾದ್ ಅವರನ್ನು ಸನ್ಮಾನಿಸಲಾಯಿತು. ಉಡುಪಿ ಸೋರ್ಟ್ಸ್ ವರ್ಲ್ಡ್‌ನ ಇಲ್ಯಾಸ್, ಕೊರಗ ಸಮುದಾಯದ ಗುರಿಕಾರ ಆನಂದ್, ಬಾಯ್ಸಾ ಚಿಟ್ಪಾಡಿ ತಂಡದ ಅಧ್ಯಕ್ಷ ಶಾಮ್ ಮೂಡುಬೆಳ್ಳೆ, ಸುನಿಲ್ ಉಪಸ್ಥಿತರಿದ್ದರು. ಶಂಕರ್ ಕಾ್ಬೆಟ್ಟು ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News