×
Ad

ತೋನ್ಸೆ: ಮತದಾನ ಜಾಗೃತಿ ಕಾರ್ಯಕ್ರಮ

Update: 2018-04-11 20:18 IST

ಉಡುಪಿ, ಎ.11: ತೋನ್ಸೆ ಹೂಡೆಯ ಸಾಲಿಹಾತ್ ಮಹಿಳಾ ಪ್ರಥಮ ದರ್ಜೆಯ ಕಾಲೇಜಿನ ಆಶ್ರಯದಲ್ಲಿ ಮತದಾನ ಜಾಗೃತಿ ಕಾರ್ಯಕ್ರಮವು ಇತ್ತೀಚೆಗೆ ನಡೆಯಿತು.

ಕಾಲೇಜಿನ ಅಡಳಿತಾಧಿಕಾರಿ ಅಸ್ಲಾಮ್ ಹೈಕಾಡಿ ಮಾತನಾಡಿ, ಇಡೀ ವಿಶ್ವ ದಲ್ಲಿಯೇ ಭಾರತವು ಅತ್ಯುತ್ತಮ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾದರಿಯಾಗಿದೆ. ಚುನಾವಣೆಗಳು ಜಾತಿ, ಹಣದ ಅಧಾರದ ಮೇಲೆ ನಡೆದರೆ ಸಂವಿಧಾನದ ಆಶಯಗಳಿಗೆ ದಕ್ಕೆ ಬರುತ್ತದೆ. ಮುಂದೆ ನಡೆಯುವ ಚುನಾವಣೆಗಳಲ್ಲಿ ಮತ ದಾನದ ಹಕ್ಕು ಹೊಂದಿರುವ ಎಲ್ಲರು ಯಾವುದೇ ಆಸೆ ಅಕಾಂಕ್ಷೆಗಳಿಗೆ ಒಳಗಾ ಗದೆ ನಿರ್ಭಯವಾಗಿ ಮತದಾನ ಮಾಡಬೇಕು ಎಂದರು.

 ಈ ಬಾರಿಯ ಚುನಾವಣೆಗಳಲ್ಲಿ ಪ್ರಥಮ ಬಾರಿ ಮತ ಚಲಾಯಿಸುತ್ತಿರುವ ವಿದ್ಯಾರ್ಥಿಗಳು ಮತದಾನಕ್ಕೆ ಸಂಬಂಧಪಟ್ಟ ಮಾಹಿತಿಯನ್ನು ಪಡೆದು ಕೊಂಡರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳು ಮತದಾನದ ಬಗ್ಗೆ ಪ್ರತಿಜ್ಞೆ ಸ್ವೀಕರಿಸಿದರು. ಉಪನ್ಯಾಸಕರಾದ ಸಬೀನಾ ಆಬಿದ್, ತೇಜಸ್ವಿ ಭಟ್, ಮಂಗಳಾ, ಅಶ್ವಿನಿ, ಜೋಸ್ಲಿನ್ ಮುಂತಾದವರು ಮಾತನಾಡಿದರು.

ಕಾಲೇಜಿನ ವಿದ್ಯಾರ್ಥಿನಿ ಸಭಾ ನೂರ್ ಮುಹಮ್ಮದ್ ಸ್ವಾಗತಿಸಿದರು. ಅರ್ಫಾ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News