ಅನಿಲಕಟ್ಟೆ: ಪ್ರತಿಭಾ ಪುರಸ್ಕಾರ, ಸನ್ಮಾನ
Update: 2018-04-11 20:20 IST
ವಿಟ್ಲ, ಎ.11: ಅನಿಲಕಟ್ಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರತಿಬಾ ಪುರಸ್ಕಾರ ಕಾರ್ಯಕ್ರಮ ಶಾಲೆಯ ಅಧ್ಯಕ್ಷ ವಸಂತ ಸೊರಂಗದಮೂಲೆ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆಯಿತು.
ಇದೇ ಸಂದರ್ಭ ರಾಷ್ಟ್ರೀಯ ನೆಟ್‌ಬಾಲ್ ತಂಡದ ಉಪನಾಯಕನಾಗಿರುವ ಅನಿಲಕಟ್ಟೆ ಶಾಲೆಯ ಹಳೆವಿದ್ಯಾರ್ಥಿ ನಿತಿನ್ ಪೂಜಾರಿಯವರನ್ನು ಸನ್ಮಾನಿಸಲಾಯಿತು.
ಮುಖ್ಯ ಅತಿಥಿಗಳಾಗಿ ಶಿಕ್ಷಣ ತಜ್ಞ ಈಶ್ವರ ಭಟ್ ಪೂರ್ಲಪ್ಪಾಡಿ, ಸಾಹಿತ್ಯ ವೇದಿಕೆಯ ದ.ಕ. ಜಿಲ್ಲಾಧ್ಯಕ್ಷ ಅಬೂಬಕರ್ ಅನಿಲಕಟ್ಟೆ ಭಾಗವಹಿಸಿದ್ದರು.
ಶಾಲಾ ಮುಖ್ಯ ಶಿಕ್ಷಕಿ ರಾಜೀವಿ ಬಂಗೇರ ಸ್ವಾಗತಿಸಿದರು. ಡೊಟ್ಟಿ ಡಿಸೋಜ ವಂದಿಸಿದರು. ಅನುಷಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.