ಉಡುಪಿ: ‘ಸಂಘಟಿತ ಕೃಷಿಕರ ಅಭಿವೃದ್ಧಿ-ದೇಶದ ಅಭಿವೃದ್ಧಿ’
ಉಡುಪಿ, ಎ.11:ಕೃಷಿಕರು ತಮ್ಮ ಹಕ್ಕುಗಳಿಗಾಗಿ ಸಂಘಟಿತರಾಗಿ ಮುಂದು ವರಿದರೆ ತಮ್ಮ ಅಭಿವೃದ್ಧಿಯ ಜೊತೆಗೆ ದೇಶದ ಅಭಿವೃದ್ಧಿಗೂ ಕಾರಣರಾಗುತ್ತಾರೆ ಎಂದು ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು ಹೇಳಿದ್ದಾರೆ.
ಪೆರಂಪಳ್ಳಿ ಕೃಷಿಕ ಸಂಘ, ಜಿಲ್ಲಾ ಕೃಷಿಕ ಸಂಘ ಮತ್ತು ವಿಜಯಾ ಗ್ರಾಮೀಣಾ ಭಿವೃದ್ಧಿ ಪ್ರತಿಷ್ಠಾನ ಮಂಗಳೂರು ಸಹಯೋಗದಲ್ಲಿ ಪೆರಂಪಳ್ಳಿ ಬೊಬ್ಬರ್ಯ ಕಟ್ಟೆ ವಠಾರದಲ್ಲಿ ನಡೆದ ಪ್ರಥಮ ವಾರ್ಷಿಕ ಹಬ್ಬ ಹಾಗೂ ಕೃಷಿ ವಿಚಾರಧಾರೆ_ ಕೃಷಿ, ಹೈನುಗಾರಿಕೆ ಕುರಿತ ಸಮಗ್ರ ಕೃಷಿ ಮಾಹಿತಿ ಕಾರ್ಯಕ್ರಮ ‘ಸಿರಿತುಪ್ಪೆ-2018’ನ್ನು ಉ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಪೆರಂಪಳ್ಳಿ ಸುಬ್ರಮಣ್ಯ ಶ್ರೀಯಾನ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮ ದಲ್ಲಿ ಸಹಾಯಕ ಕೃಷಿ ನಿರ್ದೇಶಕ ಮೋಹನ್‌ರಾಜ್, ಮೆಸ್ಕಾಂ ಎಇಇ ಗಣರಾಜ ಭಟ್, ವಿಜಯಾ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಉದಯ ಜಿ. ಹೆಗ್ಡೆ ಮುಖ್ಯ ಅತಿಥಿಗಳಾಗಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಜಿಲ್ಲಾ ಕೃಷಿಕ ಸಂಘದ ಕುದಿ ಶ್ರೀನಿವಾಸ ಭಟ್ ಮತ್ತು ಉದ್ಯಾವರ ಮುಖ್ಯಪಶು ವೈದ್ಯಾಧಿಕಾರಿ ಡಾ.ಸಂದೀಪ್ ಶೆಟ್ಟಿ ಭಾಗವಹಿಸಿ ದ್ದರು.
ಶ್ರೀನಿವಾಸ ಬಲ್ಲಾಳ್ ಮಲ್ಲಂಪಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿ, ರವೀಂದ್ರ ಪೂಜಾರಿ ಶೀಂಬ್ರ ವಂದಿಸಿದರು. ಪೆರಂಪಳ್ಳಿ ಸುಬ್ರಮಣ್ಯ ಶ್ರೀಯಾನ್ ಅ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಹಾಯಕ ಕೃಷಿನಿರ್ದೇಶಕ ಮೋಹನ್‌ರಾಜ್, ಮೆಸ್ಕಾಂ ಎಇಇ ಗಣರಾಜಟ್, ವಿಜಯಾ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಉದಯ ಜಿ. ಹೆಗ್ಡೆ ಮುಖ್ಯ ಅತಿಥಿಗಳಾಗಿದ್ದರು.
ಸಂಪನ್ಮೂಲ ವ್ಯಕ್ತಿಗಳಾಗಿ ಜಿಲ್ಲಾ ಕೃಷಿಕ ಸಂಘದ ಕುದಿ ಶ್ರೀನಿವಾಸ ಭಟ್ ಮತ್ತು ಉದ್ಯಾವರ ಮುಖ್ಯ ಪಶು ವೈದ್ಯಾಧಿಕಾರಿ ಡಾ.ಸಂದೀಪ್ ಶೆಟ್ಟಿ ಭಾಗವಹಿಸಿದ್ದರು. ಶ್ರೀನಿವಾಸ ಬಲ್ಲಾಳ್ ಮಲ್ಲಂಪಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿ, ರವೀಂದ್ರ ಪೂಜಾರಿ ಶೀಂಬ್ರ ವಂದಿಸಿದರು. ಕೃಷಿ ಮಾಹಿತಿ ನಂತರ ತುಳುನಾಡಿನ ಸಂಸ್ಕೃತಿಯ ವೈಭವವನ್ನು ಸಾರುವ ‘ಅಂಗಣದ ಐಸಿರಿ’ ಕಾರ್ಯಕ್ರಮವನ್ನು ಉಡುಪಿ ಸಿರಿ ತುಳು ಚಾವಡಿಯ ಈಶ್ವರ್ ಚಿಟ್ಪಾಡಿ ಮತ್ತು ಬಳಗ ನಡೆಸಿಕೊಟ್ಟರು. ಪೆರಂಪಳ್ಳಿಯ ಹಿರಿಯ ಕೃಷಿಕ ಅಂತಪ್ಪಪೂಜಾರಿ ಹಾಗೂ ಸಂಘಟಕ ಶ್ರೀನಿವಾಸ ಬಲ್ಲಾಳ್‌ರನ್ನು ಇದೇ ವೇದಿಕೆಯಲ್ಲಿ ಸನ್ಮಾನಿಸಲಾಯಿತು.
ಯುವಜನತೆಯ ಸಮಾವೇಶ !
ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಮಾಹಿತಿ ಅಥವಾ ಕೃಷಿಕರ ಕಾರ್ಯಕ್ರಮ ವೆಂದರೆ ಅಲ್ಲಿ ಸೇರುವವರು 50-60 ವರ್ಷ ದಾಟಿದವರೇ ಆಗಿರುವುದು ಸಾಮಾನ್ಯ. ಯುವಕರು ಬೆರಳೆಣಿಕೆಯಷ್ಟೆ. ಆದರೆ ಪೆರಂಪಳ್ಳಿಯಂತಹ ಸಣ್ಣ ಹಳ್ಳಿಯಲ್ಲಿ ಯುವಕ-ಯುವತಿಯರೇ ಮುಂಚೂಣಿಯಲ್ಲಿದ್ದರು !
ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಮಾಹಿತಿ ಅಥವಾ ಕೃಷಿಕರ ಕಾರ್ಯಕ್ರಮ ವೆಂದರೆ ಅಲ್ಲಿ ಸೇರುವವರು 50-60 ವರ್ಷ ದಾಟಿದವರೇ ಆಗಿರುವುದು ಸಾಮಾನ್ಯ. ಯುವಕರು ಬೆರಳೆಣಿಕೆಯಷ್ಟೆ. ಆದರೆ ಪೆರಂಪಳ್ಳಿಯಂತಹ ಸಣ್ಣ ಹಳ್ಳಿಯಲ್ಲಿ ಯುವಕ-ಯುವತಿಯರೇ ಮುಂಚೂಣಿಯಲ್ಲಿದ್ದರು ! ನಮ್ಮ ಪೂರ್ವಿಕರು- ಹಿರಿಯರು ಕೃಷಿಗೆ ಬಳಸುತ್ತಿದ್ದ ಕೃಷಿ ಉಪಕರಣಗಳ ಪ್ರದರ್ಶನ, ಸಂಚಾರಿ ತರಕಾರಿ ಮಾರುಕಟ್ಟೆ, ನವೀನ ಮಾದರಿಯ ಕೃಷಿ ಯಂತ್ರೋಪಕರಣಗಳ ಪ್ರದರ್ಶನ-ಮಾರಾಟ ಜನರನ್ನು ಆಕರ್ಷಿಸಿತು.
ಕಾರ್ಯಕ್ರಮಕ್ಕೆ ಬಂದವರಿಗೆಲ್ಲ ಬೆಲ್ಲ ನೀರು, ಹೆಸರು ಕಾಳಿನ ಜ್ಯೂಸು, ಹಲಸಿನ ಗಟ್ಟಿ- ಚಹಾ ನೀಡಲಾಯಿತು. 500ಕ್ಕೂ ಅಧಿಕ ಮಂದಿ-ಹೆಚ್ಚಿನವರು ಮಹಿಳೆಯರು- ಸೇರಿ ರೈತ ಸಮಾವೇಶದ ವಾತಾವರಣ ನಿರ್ಮಿಸಿದರು.