ಮೂಡುಬಿದಿರೆ: ಟೆಂಪೊ ಢಿಕ್ಕಿ; ಆಟೊ ಚಾಲಕ ಮೃತ್ಯು
Update: 2018-04-11 21:18 IST
ಮೂಡುಬಿದಿರೆ, ಎ.11: ಟೆಂಪೊವೊಂದು ಆಟೊ ರಿಕ್ಷಾಕ್ಕೆ ಮುಖಾಮುಖಿಯಾಗಿ ಢಿಕ್ಕಿಯಾದ ಪರಿಣಾಮ ಆಟೊ ಚಾಲಕ ಮೃತಪಟ್ಟ ಘಟನೆ ಮೂಡುಬಿದಿರೆ ಯಲ್ಲಿ ಬುಧವಾರ ನಡೆದಿದೆ.
ಕೊಡಂಗಲ್ಲು ಫ್ರೆಂಡ್ಸ್ ಕ್ಲಬ್‌ನ ಸ್ಥಾಪಕಾಧ್ಯಕ್ಷ ನವೀನ್ ಕರ್ಕೇರಾ (34) ಮೃತ ಆಟೊ ಚಾಲಕ ಎಂದು ಗುರುತಿಸಲಾಗಿದೆ.
ನವೀನ್ ಅವರು ಆಟೊ ಚಾಲಕರಾಗಿ ಜೀವನ ನಡೆಸುತ್ತಿದ್ದರು. ಸಂಜೆಯ ಸುಮಾರಿಗೆ ಮೂಡುಬಿದಿರೆ ಕಡೆಯಿಂದ ಕೊಡಂಗಲ್ಲು ಕಡೆಗೆ ಹೋಗುತ್ತಿದ್ದ ವೇಳೆ ಅಪೂರ್ವನಗರದ ಬಳಿ ಮೂಡುಬಿದಿರೆ ಕಡೆಗೆ ಹೋಗುತ್ತಿದ್ದ ಟೊಂಪೊ ಢಿಕ್ಕಿ ಹೊಡೆದಿದ್ದು, ತೀವೃವಾಗಿ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ಸಾಗಿಸುವ ಸಂದರ್ಭ ಮಾರ್ಗ ಮಧ್ಯೆ ಮೃತ ಪಟ್ಟರು ಎಂದು ತಿಳಿದುಬಂದಿದೆ.
ಮೂಡುಬಿದಿರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ ದೂರು ದಾಖಲಿಸಿಕೊಂಡಿದ್ದಾರೆ.