‘ಮೇಲ್ತೆನೆ’ಯಿಂದ ಬ್ಯಾರಿ ಪ್ರಬಂಧ ಮಂಡನೆ- ಚರ್ಚೆ
ಮಂಗಳೂರು, ಎ.11: ದೇರಳಕಟ್ಟೆಯ ‘ಮೇಲ್ತೆನೆ’ ಸಂಘಟನೆಯಿಂದ ಬ್ಯಾರಿ ಭಾಷೆ, ಸಾಹಿತ್ಯ, ಸಂಸ್ಕೃತಿ, ಕಲೆ ಇತ್ಯಾದಿ ವಿಚಾರಕ್ಕೆ ಸಂಬಂಧಿಸಿ ಮಾಸಿಕವಾಗಿ ನಡೆಸಿಕೊಂಡು ಬರುತ್ತಿರುವ ಪ್ರಬಂಧ ಮಂಡನೆ ಕಾರ್ಯಕ್ರಮವು ಮಂಗಳವಾರ ದೇರಳಕಟ್ಟೆಯಲ್ಲಿ ನಡೆಯಿತು.
‘ಮೇಲ್ತೆನೆ’ಯ ನೂತನ ಸದಸ್ಯ ಮನ್ಸೂರ್ ಅಹ್ಮದ್ ಸಾಮಣಿಗೆ ‘ಬ್ಯಾರಿ ಸಮುದಾಯ ನಡೆದುಬಂದ ಹಾದಿಯ ಮೇಲೆ ಒಂದು ಪಕ್ಷಿನೋಟ’ ಹಾಗೂ ಹಿರಿಯ ಸದಸ್ಯ ಮುಹಮ್ಮದ್ ಭಾಷಾ ನಾಟೆಕಲ್ ‘ಬ್ಯಾರಿಗಳ ಹಿಂದಿನ ಮದುವೆ ಪದ್ಧತಿ’ ಎಂಬ ವಿಷಯದ ಬಗ್ಗೆ ಮಂಡಿಸಿದ ಪ್ರಬಂಧದ ಬಗ್ಗೆ ಸದಸ್ಯರು ಚರ್ಚೆ ನಡೆಸಿದರು.
ಕಾರ್ಯಕ್ರಮದಲ್ಲಿ ಗೌರವಾಧ್ಯಕ್ಷ ಆಲಿಕುಂಞಿ ಪಾರೆ, ಉಪಾಧ್ಯಕ್ಷ ಬಶೀರ್ ಕಲ್ಕಟ್ಟ, ಕೋಶಾಧಿಕಾರಿ ರಫೀಕ್ ಪಾಣೇಲ, ಜೊತೆ ಕಾರ್ಯದರ್ಶಿ ನಿಯಾಝ್ ಮಾಸ್ಟರ್, ಸದಸ್ಯರಾದ ಇಸ್ಮತ್ ಪಜೀರ್, ನಿಝಾಮ್ ಬಜಾಲ್, ಶಿಹಾಬ್ ದೇರಳಕಟ್ಟೆ, ಉಪಸ್ಥಿತರಿದ್ದರು.
‘ಮೇಲ್ತೆನೆ’ಯ ಅಧ್ಯಕ್ಷ ಬಶೀರ್ ಅಹ್ಮದ್ ಕಿನ್ಯ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಹಂಝ ಮಲಾರ್ ಸ್ವಾಗತಿಸಿ, ವಂದಿಸಿದರು.