ಎ. 18: ಕಂಬಳಬೆಟ್ಟು ಸಾದಾತ್ ಯಂಗ್ ಮೆನ್ಸ್ ವತಿಯಿಂದ ಉಚಿತ ಮುಂಜಿ ಕಾರ್ಯಕ್ರಮ
Update: 2018-04-12 19:58 IST
ಬಂಟ್ವಾಳ, ಎ. 12: ಕಂಬಳಬೆಟ್ಟು ಸಾದಾತ್ ಯಂಗ್ ಮೆನ್ಸ್ ಅಸೋಸಿಯೇಶನ್ ವತಿಯಿಂದ 15ನೆ ವರ್ಷದ ಬಡ ಹಾಗೂ ಅನಾಥ ಮಕ್ಕಳ ಉಚಿತ ಸಾಮೂಹಿಕ ಸುನ್ನತ್ (ಮುಂಜಿ) ಕಾರ್ಯಕ್ರಮ ಎ. 18ರಂದು ಕಂಬಳಬೆಟ್ಟು ದಾರುಲ್ ಉಲೂಂ ಮದರಸ ಹಾಲ್‌ನಲ್ಲಿ ನಡೆಯಲಿದೆ.
ಕಂಬಳಬೆಟ್ಟು ಮುದರಿಸ್ ಅಲ್ ಹಾಜ್ ಇಬ್ರಾಹಿಂ ಮದನಿ ದುಆ ಆಶೀರ್ವಚನ ನೆರವೇರಿಸುವರು. ತಮ್ಮ ಮಕ್ಕಳ ಸುನ್ನತ್ (ಮುಂಜಿ) ಮಾಡಲು ಇಚ್ಛಿಸುವವರು ಇಸ್ಮಾಯಿಲ್ ಹಾಜಿ-9741669333 ಹಾಗೂ ಎಸ್.ಕೆ ಮುಹಮ್ಮದ್ 9481505034 ಸಂಪರ್ಕಿಸಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.