ಹೇರಿಕುದ್ರು: ನೀರಿಗಾಗಿ ಪರದಾಟ
Update: 2018-04-12 20:59 IST
ಕುಂದಾಪುರ, ಎ.12: ಸುಮಾರು ಒಂದೂವರೆ ತಿಂಗಳಿನಿಂದ ಆನಗಳ್ಳಿ ಗ್ರಾಪಂ ವ್ಯಾಪ್ತಿಯ ಹೇರಿಕುದ್ರು ಪ್ರದೇಶದಲ್ಲಿ ಜನರು ನೀರಿಗಾಗಿ ಪರಿತಪಿಸುತ್ತಿದ್ದು, ಸಕಾಲದಲ್ಲಿ ನೀರಿನ ವ್ಯವಸ್ಥೆ ಮಾಡುವಲ್ಲಿ ಆನಗಳ್ಳಿ ಗ್ರಾಪಂ ಆಡಳಿತ ವಿಫಲವಾಗಿದೆ ಎಂದು ಸಿಪಿಐ(ಎಂ) ಕುಂದಾಪುರ ವಲಯ ಸಮಿತಿ ಆರೋಪಿಸಿದೆ.
ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದಾಗಿ ಪೈಪ್‌ಲೈನ್ ಹಾಳಾಗಿರುವುದರಿಂದ, ಉಸ್ತುವಾರಿ ವಹಿಸಿಕೊಂಡಿರುವ ಐಆರ್‌ಬಿ ಕಂಪೆನಿ ಪೈಪ್‌ಲೈನ್ ದುರಸ್ಥಿಯ ಸಂಪೂರ್ಣ ಜವಾಬ್ದಾರಿ ವಹಿಸಿಕೊಳ್ಳಬೇಕು. ಪೈಪ್‌ಲೈನ್ ದುರಸ್ಥಿ ಆಗುವವರೆಗೆ ಇತರೆ ಗ್ರಾಮಗಳ ಮೂಲಕ ಕುಡಿಯುವ ನೀರನ್ನು ಐಆರ್‌ಬಿ ಕಂಪೆನಿ ಸರಬರಾಜು ಮಾಡಬೇಕೆಂದು ಸಿಪಿಎಂ ಹೇಳಿಕೆಯಲ್ಲಿ ಒತ್ತಾಯಿಸಿದೆ.