×
Ad

ವೈದ್ಯರ ರಾಷ್ಟ್ರೀಯ ಸಿಲ್ವರ್ ಕ್ರಿಕೆಟ್ ಟೂರ್ನಿ: ಪವನ್ ಬಡೆ ಅಬ್ಬರದ ಶತಕ: ಥಾಣೆ ತಂಡಕ್ಕೆ ಜಯ

Update: 2018-04-12 21:04 IST
ಪವನ್

ಉಡುಪಿ, ಎ.12: ಉಡುಪಿ ಜಿಲ್ಲಾ ಕ್ರಿಕೆಟ್ ಸಂಸ್ಥೆಯ ಆಶ್ರಯದಲ್ಲಿ ಮಾಹೆ ಡೀಮ್ಡ್ ವಿವಿ ಬೆಳ್ಳಿಹಬ್ಬದ ಅಂಗವಾಗಿ ಎಂಡ್‌ಪಾಯಿಂಟ್ ಕ್ರಿಕೆಟ್ ಮೈದಾನ ದಲ್ಲಿ ನಡೆದಿರುವ ವೈದ್ಯರುಗಳ ರಾಷ್ಟ್ರೀಯ ಮಟ್ಟದ ಲೆದರ್‌ಬಾಲ್ ಕ್ರಿಕೆಟ್ ಪಂದ್ಯಾಟ ‘ಸಿಲ್ವರ್ ಕ್ರಿಕೆಟ್ ಲೀಗ್-2018’ನಲ್ಲಿ ಇಂದು ಥಾಣೆ ಸುಪರ್ಬ್ಸ್ ತಂಡ ಪವನ್ ಬಡೆ ಅವರ ಅಬ್ಬರದ ಅಜೇಯ ಶತಕದ ನೆರವಿನಿಂದ ಕಿಮ್ಸ್ ಹೈದರಾಬಾದ್ ತಂಡವನ್ನು 81ರನ್‌ಗಳ ಅಂತರದಿಂದ ಪರಾಭವಗೊಳಿಸಿತು.

ಟಾಸ್‌ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಥಾಣೆ ತಂಡದ ಪರವಾಗಿ ಪವನ್ ಬಢೆ ಕೇವಲ 51 ಚೆಂಡುಗಳಲ್ಲಿ 9 ಬೌಂಡರಿ ಹಾಗೂ 8 ಸಿಕರ್ಸ್‌ಗಳ ನೆರವಿನಿಂದ 106 ರನ್‌ಗಳಿ ಅಜೇಯರಾಗಿ ಉಳಿದಿದ್ದು, ಸೋಹನ್ ಥಾಕೂರ್ 53 ರನ್‌ಗಳಿಸಿದರು. ಇದರಿಂದ ಥಾಣೆ ತಂಡ ನಿಗದಿತ 20 ಓವರುಗಲ್ಲಿ 5 ವಿಕೆಟ್‌ಗೆ 211 ರನ್‌ಗಳಿಸಿತು.

ಉತ್ತರವಾಗಿ ಹೈದರಾಬಾದ್ ತಂಡ 20 ಓವರುಗಳಲ್ಲಿ 9ವಿಕೆಟ್‌ಗೆ 130 ರನ್ ಮಾತ್ರ ಗಳಿಸಲು ಶಕ್ತವಾಗಿ 81 ರನ್‌ಗಳ ಅಂತರದಿಂದ ಸೋಲೊಪ್ಪಿ ಕೊಂಡಿತು. ಥಾಣೆಯ ಗಣೇಶ್ ಪವಾರ್ 23 ರನ್‌ಗಳಿಗೆ 4, ಸೋಹನ್ 17ಕ್ಕೆ 3 ವಿಕೆಟ್ ಪಡೆದರು.

ಪುಣೆ ತಂಡಕ್ಕೆ ಜಯ: ದಿನದ ಎರಡನೇ ಪಂದ್ಯದಲ್ಲಿ ಕ್ಯಾಲಿಕಟ್ ಹರಿಕೇನ್ ತಂಡ ತಾನಾಡಿದ ಎರಡನೆ ಪಂದ್ಯದಲ್ಲಿ ಸತತ ಎರಡನೇ ಸೋಲನನುಭವಿಸಿತು. ಪುಣೆಯ ಪದ್ಮಾಲಯ ಸ್ಟಾರ್ ತಂಡದ ವಿರುದ್ಧ ಅದು ಎಂಟು ವಿಕೆಟ್‌ಗಳ ಅಂತರದ ಸೋಲನನುಭವಿಸಿತು. ಮೊದಲು ಬ್ಯಾಟಿಂಗ್ ನಡೆಸಿದ 12 ಓವರುಗಳಲ್ಲಿ ಕೇವಲ 28 ರನ್‌ಗಳಿಗೆ ಆಲೌಟಾದರೆ, ಪದ್ಮಾಲಯ ಸ್ಟಾರ್ ತಂಡ ಆರು ಓವರುಗಳಲ್ಲಿ ಎರಡು ವಿಕೆಟ್ಳ ನಷ್ಟಕ್ಕೆ ವಿಜಯಿ ರನ್ ಗಳಿಸಿತು.

ಮಂಗಳೂರು ಪರಾಭವ: ದಿನದ ಮತ್ತೊಂದು ಪಂದ್ಯದಲ್ಲಿ ಬೆಂಗಳೂರಿನ ಸ್ಪೆಷಲಿಸ್ಟ್ ತಂಡ, ಮಂಗಳೂರು ರಾಯಲ್ ವಿರುದ್ಧ 13 ರನ್‌ಗಳ ಜಯ ಸಂಪಾದಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News