38ನೆ ಇಂಡಿಯಾ ಮಾಸ್ಟರ್ ಅಥ್ಲೆಟ್ ಮೀಟ್: ದೂರದ ಓಟದಲ್ಲಿ ಮಹಾರಾಷ್ಟ್ರ , ಕರ್ನಾಟಕದ ಕ್ರೀಡಾಳುಗಳ ಪ್ರಾಬಲ್ಯ
ಮಂಗಳೂರು, ಎ.12: ನಗರದ ಮಂಗಳಾ ಕ್ರೀಡಾಂಗಣದಲ್ಲಿ ಆರಂಭಗೊಂಡ ಹಿರಿಯ ನಾಗರಿಕರ ಕ್ರೀಡಾ ಕೂಟದಲ್ಲಿ ಮಹಿಳೆಯರ ವಿಭಾಗದದಲ್ಲಿ ಮಹಾರಾಷ್ಟ್ರದ ಕ್ರೀಡಾಳುಗಳು ಹಾಗೂ ಪುರುಷರ ವಿಭಾಗದಲ್ಲಿ ಮಹಾರಾಷ್ಟ್ರ , ಕರ್ನಾಟಕದ ಕ್ರೀಡಾಪಟುಗಳು ದೂರದ ಓಟ ವಿಭಾಗದಲ್ಲಿ ಹಲವು ಚಿನ್ನದ ಪದಕಗಳನ್ನು ಪಡೆದು ಮೊದಲ ದಿನ ಪ್ರಾಬಲ್ಯವನ್ನು ಮೆರೆದಿದ್ದಾರೆ.
45ರ ವಯೋಮಾನದ ಮೇಲಿನ ಮಹಿಳೆಯರ 5000 ಮೀಟರ್ ಓಟದಲ್ಲಿ ಮಹಾರಾಷ್ಟ್ರದ ವಿಜಯ ಭಟ್ ಪ್ರಥಮ ಸವಿತಾ ಸಂಗ್ರಾಮ ಪಂದಾರೆ ದ್ವೀತೀಯ ಮತ್ತು ಶಾರದಾ ರಾಣಾವಾರೆ ತೃತೀಯ ಸ್ಥಾನ ಪಡೆದು ಮೂರು ಸ್ಥಾನವನ್ನು ಮಹಾರಾಷ್ಟ್ರದ ಕ್ರೀಡಾಳುಗಳು ಪಡೆದಿದ್ದಾರೆ.
40ರ ಮೇಲಿನ ವಯೋಮಾನದ ಮಹಿಳೆಯರ 5000 ಮೀಟರ್ ಓಟದಲ್ಲೂ ಮಹಾರಾಷ್ಟ್ರದ ಪುಜಾ ವರ್ಮಾ ಪ್ರಥಮ ಸ್ಥಾನ ಛತ್ತೀಸ್ ಗಢದ ಅಮರಾವತಿ ಮಂದಾವಿ ದ್ವಿತೀಯ ಹಾಗೂ ಛತ್ತೀಸ್ ಗಢದ ಕಮಲಾ ಕಶ್ಯಫ್ ತೃತೀಯ ಸ್ಥಾನ ಪಡೆದಿದ್ದಾರೆ.
35ರ ಮೇಲಿನ ವಯೋಮಾನದ ಮಹಿಳಾ ವಿಭಾಗದ 5000 ಮೀಟರ್ ಓಟದಲ್ಲಿ ಮಹಾರಾಷ್ಟ್ರದ ಸೀಮಾ ವರ್ಮಾ ಪ್ರಥಮ ಹಾಗೂ ಕರ್ನಾಟಕದ ವಿದ್ಯಾ ಬಿ.ಎಚ್ ಮತ್ತು ಅನುರಾಧ ನರಸಿಂಹ ದ್ವಿತೀಯ ಹಾಗೂ ತೃತೀಯ ಸ್ಥಾನಗಳಿಸಿದ್ದಾರೆ. 30ರ ಮೇಲಿನ ವಯೋಮಾನದ ಮಹಿಳೆಯರ 5000 ಮೀಟರ್ ಓಟದಲ್ಲಿ ಕೇರಳದ ರಜಿತನ್ ಪ್ರಥಮ, ಮಹಾರಾಷ್ಟ್ರದ ತೃಪ್ತಿ ಪಾಟೀಲ್ ಹಾಗೂ ಸ್ವಾತಿ ದ್ವಿತೀಯ ಮತ್ತು ತೃತೀಯ ಸ್ಥಾನಗಳಿಸಿದ್ದಾರೆ.
ಪುರುಷರ ವಿಭಾಗದ 5000 ಮೀಟರ್ ಓಟದಲ್ಲಿ 70ವರ್ಷ ಮೇಲಿನವರ ವಿಭಾಗದಲ್ಲಿ ಮಹಾರಾಷ್ಟ್ರದ ದೀವಾಕರ ಎಸ್ ಬೋಯರ್ ಪ್ರಥಮ,ಕರ್ನಾಟಕದ ಮೈಕಲ್ ಡಿ ಸೋಜ ಹಾಗೂ ವಿಜಯ ಕುಮಾರ್ ದ್ವಿತೀಯ ಮತ್ತು ತೃತೀಯ ಸ್ಥಾನಗಳಿಸಿದ್ದಾರೆ. 75ವರ್ಷ ಮೇಲಿನ ವಿಭಾಗದಲ್ಲಿ ಮಹಾರಾಷ್ಟ್ರದ ಮುನ್ನಾಲಾಲ್ ಯದೂ ಪ್ರಥಮ ಸ್ಥಾನ ಹಾಗೂ ಕೇರಳದ ಕೆ.ಸಿ.ಜೋಸೆಫ್ ದ್ವಿತೀಯ ತಮಿಳು ನಾಡಿನ ದುರೈ ಪಾಂಡಿ ತೃತೀಯ ಸ್ಥಾನ ಗಳಿಸಿದ್ದಾರೆ.65ರ ಮೇಲಿನವರ 5000 ಮೀಟರ್ ಓಟದ ವಿಭಾಗದಲ್ಲಿ ಗುಜರಾತಿನ ಸನಾ ಭಾಯ್ ಪಡಿಯಾರ್ ಪ್ರಥಮ, ಹರಿಯಾನದ ದಯಾನಂದ್ ದ್ವಿತೀಯ ಹಾಗೂ ಚಂಡಿಗಢದ ಸುಖದೇವ್ ಸಿಂಗ್ ತೃತೀಯ ಸ್ಥಾನಗಳಿಸಿದ್ದಾರೆ.
ಉತ್ಸಾಹದಿಂದ ಪಾಲ್ಗೊಂಡ ಹಿರಿಯ ನಾಗರಿಕರು:- ಭಾರತದ ರಾಷ್ಟ್ರ ಮಟ್ಟದ ಕ್ರೀಡಾ ಕೂಟದಲ್ಲಿ ನೆರೆಯ ಶ್ರೀಲಂಕಾ ದೇಶದ ಕ್ರೀಡಾ ಪಟುಗಳು ಅತಿಥಿ ಕ್ರೀಡಾ ಪಟುಗಳಾಗಿ ಭಾಗವಹಿಸಿದ್ದರು. ಭಾರತದ 18 ರಾಜ್ಯಗಳ 1600 ಕ್ರೀಡಾ ಪಟುಗಳು ಭಾಗವಹಿಸಿದ್ದರು. ಕರ್ನಾಟಕ, ಹರ್ಯಾನ, ಗುಜರಾತ್, ಮಹಾರಾಷ್ಟ್ರ, ಮಧ್ಯಪ್ರದೇಶ, ಒಡಿಶಾ, ಛತ್ತೀಸ್ ಗಡ, ಚಂಡಿಗಢ, ಉತ್ತರ ಪ್ರದೇಶ, ಕೇರಳ, ತಮಿಳು ನಾಡು ಹಾಗೂ ಶ್ರೀಲಂಕಾದ ಹಿರಿಯ ನಾಗರಿಕರು ಪಥ ಸಂಚಲ ಕಾರ್ಯಕ್ರಮದಲ್ಲೂ ಶಿಸ್ತಿನಿಂದ ಪಾಲ್ಗೊಂಡರು.
ಮಹಾರಾಷ್ಟ್ರದ 85 ವರ್ಷ ದಾಟಿದ ಶ್ಯಾಮ್ ರಾವ್ ದೇಶಪಾಂಡೆ ಪಂದ್ಯದ ಅತ್ಯಂತ ಹೆಚ್ಚು ವಯೋಮಾನದ ಹಿರಿಯ ನಾಗರಿಕರು 5000 ಮೀಟರ್ ಓಟ, ಡಿಸ್ಕಸ್ ತ್ರೋ, ಈಟಿ ಎಸೆತ ಸ್ಪರ್ಧೆಯಲ್ಲಿ ಭಾಗವಹಿಸಿ ಗಮನ ಸೆಳೆದರು.
ಗೃಹ ಸಚಿವರಿಗೆ ದೈಹಿಕ ಶಿಕ್ಷಣ ಪಾಠ ಹೇಳಿದ ಮೊಹಮ್ಮದ್ ಇಬ್ರಾಹೀಂ ನಿವೃತ್ತ ದೈಹಿಕ ಶಿಕ್ಷಕರಾಗಿದ್ದು 80ವರ್ಷ ಮೇಲ್ಪಟ್ಟವರ ಸ್ಪರ್ಧೆಯಲ್ಲಿ ಭಾಗವಹಿಸಲು ಆಗಮಿಸಿದ್ದರು. ರಾಷ್ಟ್ರ ಮಟ್ಟದ ಹಿರಿಯ ನಾಗರಿಕರ ಜಾವೆಲಿನ್ ತ್ರೋ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಪಡೆದಿದ್ದು ಕಳೆದ 15 ವರ್ಷಗಳಿಂದ ಹಿರಿಯ ನಾಗರಿಕರ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದಾರೆ.
ಬೆಂಗಳೂರಿನಲ್ಲಿ ದೈಹಿಕ ಶಿಕ್ಷಕರಾಗಿದ್ದಾಗ ರಾಜ್ಯದ ಗೃಹ ಸಚಿವ ರಾಮಲಿಂಗ ರೆಡ್ಡಿಯವರಿಗೆ ದೈಹಿಕ ಶಿಕ್ಷಣದ ಪಾಠ ಹೇಳಿದ್ದಾರೆ.ಮಲೇಶಯದಲ್ಲಿ 1996ರಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿ ಚ್ಯಾಂಪಿಯನ್ ಆಗಿದ್ದ ಚಾಮರಾಜ ನಗರ ಜಿಲ್ಲೆಯ ಕೊಳ್ಳೆಗಾಲ ತಾಲೂಕಿನ ರಾಚಪ್ಪಾಜಿ ನಿವೃತ್ತ ಬ್ಯಾಂಕ್ ಮ್ಯಾನೇಜರ್,ಚಾಮರಾಜ ನಗರದ ದೈಹಿಕ ಶಿಕ್ಷಕ ನಟರಾಜಪ್ಪ 70 ವರ್ಷ ಮೇಲ್ಪಟ್ಟವರ ವಿಭಾಗದಲ್ಲಿ ಭಾಗವಹಿಸುತ್ತಿದ್ದರೆ.ಅದೇ ಜಿಲ್ಲೆಯವರಾದ ಕೆ.ಮಾದ 75ವರ್ಷ ಮೇಲ್ಪಟ್ಟವರ ವಿಭಾಗದಲ್ಲಿ ಭಾಗವಹಿಸುತ್ತಿರುವ ಇಬ್ಬರು ನಿವೃತ್ತ ದೈಹಿಕ ಶಿಕ್ಷಕರಗಿದ್ದು ಉತ್ಸಾಹದಿಂದ ಭಾಗವಹಿಸುತ್ತಿದ್ದಾರೆ.
ಬೆಂಗಳೂರು ಸ್ಪೆಷಲಿಸ್ಟ್ ತಂಡ ನೀಡಿದ 184 ರನ್‌ಗಳ ವಿಜಯದ ಗುರಿಯನ್ನು ಬೆನ್ನಟ್ಟಿದ ಮಂಗಳೂರು ರಾಯಲ್ಸ್ ತಂಡ ದಿಟ್ಟ ಆಟಚ ಪ್ರದರ್ಶಿಸಿದರೂ, ನಿಗದಿತ 20 ಓವರುಗಳಲ್ಲಿ 9ವಿಕೆಟ್‌ಗಳ ನಷ್ಟಕ್ಕೆ 170 ರನ್ ಮಾತ್ರ ಗಳಿಸಲು ಶಕ್ತವಾಯಿತು.
ಬೆಂಗಳೂರು ತಂಡ, ಅನಿಲ್ ಅವರ ಆಕರ್ಷಕ 75, ಅಜೇಂದ್ರರ 51 ರನ್ ಗಳ ನೆರವಿನಿಂದ 20 ಓವರುಗಳಲ್ಲಿ 6 ವಿಕೆಟ್ ನಷ್ಟಕ್ಕೆ 183 ರನ್ ಗಳಿಸಿತು. ಉತ್ತರವಾಗಿ ಮಂಗಳೂರು ತಂಡದ ಪ್ರದೀಪ್ 45 ಹಾಗೂ ದೀಪಕ್ 33 ರನ್ ಗಳಿಸಿದರು.