×
Ad

ಛಾಯಾಗ್ರಾಹಕನ ಮೇಲೆ ದೈವ ಪಾತ್ರಧಾರಿಯ ದಾಳಿ: ಕ್ಯಾಮರಾ ಧ್ವಂಸ

Update: 2018-04-12 22:07 IST

ಮಂಗಳೂರು, ಎ.12: ದೈವನರ್ತನದ ಚಿತ್ರೀಕರಿಸುತ್ತಿದ್ದ ಛಾಯಾಗ್ರಾಹಕರೊಬ್ಬರ ಕ್ಯಾಮರಾವನ್ನು ದೈವ ಪಾತ್ರಧಾರಿ ಪುಡಿಗಟ್ಟಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮೇರ್ಲಪದವಿನಲ್ಲಿ ನಡೆದ ಗುಳಿಗಕೋಲದಲ್ಲಿ ಈ ಘಟನೆ ನಡೆದಿದೆ.

ಛಾಯಾಗ್ರಾಹಕ ಗಣೇಶ್ ಪೂಜಾರಿಯವರು ಇಲ್ಲಿ ನಡೆಯುತ್ತಿದ್ದ ಗುಳಿಗಕೋಲದ ಚಿತ್ರೀಕರಣ ನಡೆಸುತ್ತಿದ್ದರು. ಈ ಸಂದರ್ಭ ಏಕಾಏಕಿ ಗಣೇಶ್ ಪೂಜಾರಿ ಬಳಿ ಬಂದ ದೈವ ಪಾತ್ರಧಾರಿ ಗಣೇಶ್ ಅವರಲ್ಲಿದ್ದ ಕ್ಯಾಮರಾ ಧ್ವಂಸ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. 

ಈ ಬಗ್ಗೆ ಪ್ರತಿಕ್ರಿಯಿಸಿರುವ ಗಣೇಶ್ ಪೂಜಾರಿ, "ನಾನು ಒಂದು ಮೂಲೆಯಲ್ಲಿ ಕುಳಿತು ಚಿತ್ರೀಕರಿಸುತ್ತಿದ್ದೆ. ದೈವ ಪಾತ್ರಧಾರಿ ಏಕಾಏಕಿ ಬಂದು ನನ್ನ ಕೈಯಲ್ಲಿದ್ದ ಕ್ಯಾಮರಾವನ್ನು ಪುಡಿ ಮಾಡಿದ್ದಾರೆ. ಇಂತಹ ಕಲಾವಿದರಿಂದ ದೈವಗಳ ಮೇಲಿನ ನಂಬಿಕೆ ಕಡಿಮೆಯಾಗುತ್ತಿದೆ. ಕ್ಯಾಮರಾವಿಲ್ಲದೆ ಕೆಲಸಕ್ಕೆ ಹೋಗಲಾಗದೆ ಮನೆಯಲ್ಲಿದ್ದೇನೆ" ಎಂದು ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News