ಸ್ಫೋಟಕ ತುಂಬಿದ ಟ್ರಕ್ ಸ್ಫೋಟಿಸಿ 7 ಸಾವು

Update: 2018-04-12 16:47 GMT
ಸಾಂದರ್ಭಿಕ ಚಿತ್ರ

ಬೀಜಿಂಗ್, ಎ. 12: ಉತ್ತರ ಚೀನಾದಲ್ಲಿ 5 ಟನ್‌ಗೂ ಅಧಿಕ ಸ್ಫೋಟಕಗಳನ್ನು ಸಾಗಿಸುತ್ತಿದ್ದ ಟ್ರಕ್ಕೊಂದು ಸ್ಫೋಟಿಸಿದಾಗ 7 ಮಂದಿ ಮೃತಪಟ್ಟಿದ್ದಾರೆ ಹಾಗೂ 13 ಮಂದಿ ಗಾಯಗೊಂಡಿದ್ದಾರೆ.

ಸ್ಫೋಟಕಗಳ ಉಗ್ರಾಣದ ಹೊರಗಡೆ ಸ್ಫೋಟ ಸಂಭವಿಸಿದೆ ಎಂದು ಶಾಂಕ್ಸಿ ಪ್ರಾಂತದ ಝೆನನ್ ಕೌಂಟಿ ಸರಕಾರ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಹಾಕಿದ ಹೇಳಿಕೆಯೊಂದು ತಿಳಿಸಿದೆ.

ಮೃತರಲ್ಲಿ ಟ್ರಕ್ ಚಾಲಕರು, ಉಗ್ರಾಣ ಸಿಬ್ಬಂದಿ ಮತ್ತು ಭದ್ರತಾ ಸಿಬ್ಬಂದಿ ಸೇರಿದ್ದಾರೆ.

ಈ ಉಗ್ರಾಣದಲ್ಲಿರುವ ಸ್ಫೋಟಕಗಳನ್ನು ಗಣಿಗಾರಿಕೆ ಮತ್ತು ಕಟ್ಟಡ ನಿರ್ಮಾಣದಲ್ಲಿ ಬಳಸಲಾಗುತ್ತಿದೆ. ಸ್ಫೋಟಕ್ಕೆ ಕಾರಣವಾದ ಅಂಶಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಸರಕಾರಿ ಹೇಳಿಕೆ ತಿಳಿಸಿದೆ.

ಚೀನಾ ಇತ್ತೀಚಿನ ವರ್ಷಗಳಲ್ಲಿ ಕೈಗಾರಿಕಾ ಸುರಕ್ಷತೆಯಲ್ಲಿ ಗಮನಾರ್ಹ ಸಾಧನೆ ಮಾಡಿದ್ದರೂ, ಬೃಹತ್ ಪ್ರಮಾಣದ ಅವಘಢಗಳು ಈಗಲೂ ನಡೆಯುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News