×
Ad

ಮೂರು ಮಕ್ಕಳ ತಾಯಿಯ ಅತ್ಯಾಚಾರಗೈಯಲು ಯಾರಿಗೂ ಸಾಧ್ಯವಿಲ್ಲ ಎಂದ ಬಿಜೆಪಿ ಶಾಸಕ!

Update: 2018-04-12 22:30 IST

ಲಕ್ನೋ, ಎ.12 ಯುವತಿಯ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಬಿಜೆಪಿ ಶಾಸಕ ಕುಲ್ ದೀಪ್ ಸೇಂಗರ್ ಪರ ವಹಿಸಿ “ಮೂರು ಮಕ್ಕಳ ತಾಯಿಯ ಅತ್ಯಾಚಾರಗೈಯಲು ಯಾರಿಗೂ ಸಾಧ್ಯವಿಲ್ಲ ಎಂದು ಮತ್ತೋರ್ವ ಬಿಜೆಪಿ ಶಾಸಕ ನೀಡಿರುವ ಹೇಳಿಕೆ ವಿವಾದ ಸೃಷ್ಟಿಸಿದೆ.

ಈ ಹೇಳಿಕೆ ನೀಡಿರುವ ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ಗೆ ರಾಷ್ಟ್ರೀಯ ಮಹಿಳಾ ಆಯೋಗ ನೋಟಿಸ್ ಜಾರಿ ಮಾಡಿದೆ. “ನಾನು ಮಾನಸಿಕ ದೃಷ್ಟಿಕೋನದಿಂದ ಮಾತನಾಡುತ್ತಿದ್ದೇನೆ. 3 ಮಕ್ಕಳ ತಾಯಿಯನ್ನು ಯಾರೂ ಅತ್ಯಾಚಾರಗೈಯುವುದಿಲ್ಲ. ಅದು ಸಾಧ್ಯವೂ ಇಲ್ಲ. ಇದು ಕುಲ್ ದೀಪ್ ಸೇಂಗರ್ ವಿರುದ್ಧದ ಪಿತೂರಿಯಾಗಿದೆ. ಮಹಿಳೆಯ ತಂದೆಗೆ ಯಾರಾದರೂ ಹಲ್ಲೆ ನಡೆಸಿರಬಹುದು. ಆದರೆ ಅತ್ಯಾಚಾರ ಆರೋಪವನ್ನು ನಾನು ನಂಬುವುದಿಲ್ಲ” ಎಂದು ಸುರೇಂದ್ರ ಸಿಂಗ್ ಹೇಳಿಕೆ ನೀಡಿದ್ದರು.

ತನ್ನ ಮೇಲೆ ಬಿಜೆಪಿ ಶಾಸಕ ಕುಲ್ ದೀಪ್ ಅತ್ಯಾಚಾರವೆಸಗಿದ್ದಾರೆ ಎಂದು ಆರೋಪಿಸಿದ್ದ ಮಹಿಳೆ ಮುಖ್ಯಮಂತ್ರಿ ಆದಿತ್ಯನಾಥ್ ನಿವಾಸದ ಮುಂದೆ ಆತ್ಮಹತ್ಯೆಗೆ ಯತ್ನಿಸಿದ್ದರು. ಮರುದಿನ ಪೊಲೀಸ್ ಕಸ್ಟಡಿಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಯುವತಿಯ ತಂದೆ ಸಾವನ್ನಪ್ಪಿದ್ದರು. ಈ ಎಲ್ಲಾ ಘಟನೆಗಳಿಂದ ಆದಿತ್ಯನಾಥ್ ಸರಕಾರದ ವಿರುದ್ಧ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News