ವೀಸಾ ಕೊಡಿಸುವುದಾಗಿ ವಂಚನೆ: ದೂರು
Update: 2018-04-12 22:43 IST
ಉಡುಪಿ, ಎ.12: ಉದ್ಯೋಗದ ವೀಸಾ ಕೊಡಿಸುವುದಾಗಿ ಭರವಸೆ ನೀಡಿ ಹಣ ಪಡೆದು ವಿಸಿಟಿಂಗ್ ವೀಸಾ ಕೊಡಿಸಿ ವಂಚನೆ ಮಾಡಿರುವುದಾಗಿ ನ್ಯಾಯಾಲಯದ ಖಾಸಗಿ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿ ಸಿಟಿ ಬಸ್ ನಿಲ್ದಾಣ ಬಳಿಯ ರಾಜ್‌ಟವರ್‌ನಲ್ಲಿರುವ ಟ್ರಾವೆಲ್ ವರ್ಲ್ಡ್‌ನ ಮಾಲಕ ಸುಶೀಲ್(40) ಎಂಬವರು ವಂಚನೆ ಎಸಗಿರುವುದಾಗಿ ಕೂರಾಡಿ ಹನೇಹಳ್ಳಿ ಗ್ರಾಮದ ಪ್ರಕಾಶ್ ಸುವರ್ಣ(54) ಎಂಬವರು ದೂರು ನೀಡಿದ್ದು, ಆರೋಪಿ ಸುಶೀಲ್‌ನಿಂದಾಗಿ ಅನಗತ್ಯ ವಿದೇಶ ಪ್ರಯಾಣ ಮಾಡಿ 1,20,000ರೂ. ಅಧಿಕ ಹಣ ನಷ್ಟ ಉಂಟಾ ಗಿರುವುದಾಗಿ ದೂರಿನಲ್ಲಿ ತಿಳಿಸ ಲಾಗಿದೆ.