ಸುಪ್ರೀಂ ತೀರ್ಪಿನಿಂದ ಎಸ್/ಎಸ್ ಕಾಯ್ದೆ ದುರ್ಬಲ: ಕೇಂದ್ರ ಸರಕಾರ

Update: 2018-04-12 17:42 GMT

ಮುಂಬೈ, ಎ. 12: ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಕುರಿತ ಸುಪ್ರೀಂ ಕೋರ್ಟ್‌ನ ಇತ್ತೀಚೆಗಿನ ತೀರ್ಪು ಅವರಿಗಿರುವ ಕಾನೂನಿನ ಅವಕಾಶವನ್ನು ದುರ್ಬಲಗೊಳಿಸಿದೆ. ಇದರಿಂದ ದೇಶಕ್ಕೆ ಅತಿ ದೊಡ್ಡ ಹಾನಿ ಉಂಟಾಗಿದೆ ಎಂದು ಕೇಂದ್ರ ಸರಕಾರ ಗುರುವಾರ ಹೇಳಿದೆ.

‘ತುಂಬಾ ಸೂಕ್ಷ್ಮ’ ವಿಷಯದ ಕುರಿತು ಸುಪ್ರೀಂ ಕೋರ್ಟ್ ನೀಡಿದ ತೀರ್ಪು ದೇಶದಲ್ಲಿ ಗದ್ದಲ, ಆಕ್ರೋಶ, ಅಸಮಾಧಾನ ಹಾಗೂ ಅಸೌಹಾರ್ದತೆ ಮೂಡಲು ಕಾರಣವಾಗಿದೆ ಎಂದು ಅವರು ಹೇಳಿದ್ದಾರೆ.

ಲಿಖಿತ ಹೇಳಿಕೆಯಲ್ಲಿ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್, ತನ್ನ ತೀರ್ಪಿನ ಮೂಲಕ ಸುಪ್ರೀಂ ಕೋರ್ಟ್ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಕಾಯ್ದೆಯ ಕಂದರವನ್ನು ಮುಚ್ಚಿಲ್ಲ. ಆದರೆ, ಅದಕ್ಕೆ ಬದಲು ನ್ಯಾಯಾಂಗ ಶಾಸನದ ಮೂಲಕ ತಿದ್ದುಪಡಿ ತಂದಿದೆ ಎಂದರು. ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗದ ನಡುವಿನ ಅಧಿಕಾರವನ್ನು ಪ್ರತ್ಯೇಕಗೊಳಿಸಲು ಸಾಧ್ಯವಿಲ್ಲ ಎಂದು ಅವರು ಒತ್ತಿ ಹೇಳಿದ್ದಾರೆ. ಸುಪ್ರೀಂ ಕೋರ್ಟ್‌ನ ತೀರ್ಪಿನಿಂದ ಉಂಟಾದ ಗೊಂದಲವನ್ನು ಪುನರ್‌ಪರಿಶೀಲನೆ ಮೂಲಕ ಸರಿಪಡಿಸಬೇಕು ಹಾಗೂ ಈ ತೀರ್ಪನ್ನು ಹಿಂದೆಗೆದು ಸುಪ್ರೀಂ ಕೋರ್ಟ್ ನಿರ್ದೇಶನಗಳನ್ನು ನೀಡಬೇಕು ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News