ಭಾರತಕ್ಕೆ 17ನೇ ಚಿನ್ನ ಗೆದ್ದುಕೊಟ್ಟ ಬಜರಂಗ್ ಪೂನಿಯಾ

Update: 2018-04-13 09:19 GMT

  ಗೋಲ್ಡ್‌ಕೋಸ್ಟ್, ಎ.13: ಭಾರತದ ಕುಸ್ತಿಪಟು ಬಜರಂಗ್ ಪೂನಿಯಾ ಪುರುಷರ 65 ಕೆಜಿ ಫ್ರೀಸ್ಟೈಲ್ ಫೈನಲ್ ಪಂದ್ಯದಲ್ಲಿ ಚಿನ್ನದ ಪದಕ ಜಯಿಸಿದ್ದಾರೆ. ಈ ಮೂಲಕ ಗೇಮ್ಸ್‌ನಲ್ಲಿ ಭಾರತ 17ನೇ ಚಿನ್ನದ ಪದಕ ಜಯಿಸಿದೆ.

  ಶುಕ್ರವಾರ ಏಕಪಕ್ಷೀಯವಾಗಿ ಸಾಗಿದ ಫೈನಲ್ ಪಂದ್ಯದಲ್ಲಿ ಬಜರಂಗ್ ವೇಲ್ಸ್‌ನ ಕೇನ್ ಚಾರಿಗ್ ವಿರುದ್ಧ 10-0 ಮುನ್ನಡೆ ಸಾಧಿಸುವ ಮೂಲಕ ಕೇವಲ 2 ನಿಮಿಷದಲ್ಲಿ ಪಂದ್ಯವನ್ನು ಗೆದ್ದುಕೊಂಡರು. ವೇಲ್ಸ್ ಕುಸ್ತಿಪಟುವಿಗೆ ಯಾವ ಹಂತದಲ್ಲೂ ಚೇತರಿಸಿಕೊಳ್ಳಲು ಪೂನಿಯಾ ಅವಕಾಶ ನೀಡಲಿಲ್ಲ.

ಬಜರಂಗ್ ನ್ಯೂಝಿಲೆಂಡ್‌ನ ಬ್ರಾಮ್ ರಿಚರ್ಡ್ಸ್, ನೈಜೀರಿಯದ ಅಮಾಸ್ ಡೇನಿಯಲ್ ಹಾಗೂ ಕೆನಡಾದ ವಿನ್ಸೆಂಟ್ ಡಿ ಮಾರ್ಟಿನ್ಸ್ ವಿರುದ್ಧ ಜಯ ಸಾಧಿಸಿ ಫೈನಲ್‌ಗೆ ತಲುಪಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News