ಐಪಿಎಲ್ ನ 7 ತಂಡಗಳ ಪರ ಆಟವಾಡಿದ ಏಕೈಕ ಆಟಗಾರ ಯಾರು ಗೊತ್ತಾ?

Update: 2018-04-13 17:36 GMT

ಹೊಸದಿಲ್ಲಿ, ಎ.13: ಐಪಿಎಲ್ ಎಂದರೆ ಹೊಡಿಬಡಿ ಕ್ರಿಕೆಟ್ ಅಭಿಮಾನಿಗಳಿಗೆ ಸುಗ್ಗಿ. ಐಪಿಎಲ್ ನಲ್ಲಿನ ರೋಚಕತೆ ಬೇರ್ಯಾವ ಕ್ರಿಕೆಟ್ ಫಾರ್ಮಾಟ್ ನಲ್ಲೂ ಇರುವುದಿಲ್ಲ ಎಂದು ಹೇಳುವವರಿದ್ದಾರೆ. ಐಪಿಎಲ್ ನಲ್ಲಿ ಹರಾಜು ಪ್ರಕ್ರಿಯೆ ನಡೆದಂತೆ ಆಟಗಾರರು ಬೇರೆ ಬೇರೆ ತಂಡಗಳಿಗೆ ಹರಾಜಾಗುತ್ತಾರೆ. ಇನ್ನೂ ಕೆಲವರು ಇದ್ದ ತಂಡದಲ್ಲೇ ಉಳಿಯುತ್ತಾರೆ. ಆದರೆ ಇಲ್ಲೊಬ್ಬರು ಐಪಿಎಲ್ ಗೆ ಪಾದಾರ್ಪಣೆ ಮಾಡಿದ ನಂತರ ಸುಮಾರು 7 ತಂಡಗಳ ಪರ ಆಟವಾಡಿದ್ದಾರೆ. ಇವರು ಬೇರ್ಯಾರೂ ಅಲ್ಲ ಆಸ್ಟ್ರೇಲಿಯಾದ ಆಟಗಾರ, ಐಪಿಎಲ್ ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಆಡಲಿರುವ ಆರೊನ್ ಫಿಂಚ್.

ಹೌದು 2010ರಲ್ಲಿ ಐಪಿಎಲ್ ಗೆ ಪಾದಾರ್ಪಣೆ ಮಾಡಿದ್ದ ಫಿಂಚ್ ರಾಜಸ್ಥಾನ ರಾಯಲ್ಸ್ ಪರವಾಗಿ ಆಡಿದ್ದರು. ಆನಂತರ 2017ರವರೆಗೆ ಡೆಲ್ಲಿ ಡೇರ್ ಡೆವಿಲ್ಸ್, ಪುಣೆ ವಾರಿಯರ್ಸ್, ಸನ್ ರೈಸರ್ಸ್ ಹೈದರಾಬಾದ್, ಮುಂಬೈ ಇಂಡಿಯನ್ಸ್ ಹಾಗು ಗುಜರಾತ್ ಲಯನ್ಸ್ ಪರ ಆಡಿದ್ದಾರೆ.

ಶುಕ್ರವಾರ ರಾಯಲ್ ಚಾಲೆಂಜರ್ಸ್ ವಿರುದ್ಧದ ಪಂದ್ಯದಲ್ಲಿ ಫಿಂಚ್ ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ಪರ ಆಡುತ್ತಿದ್ದಾರೆ. ಇದರೊಂದಿಗೆ ಫಿಂಚ್ ಪ್ರತಿನಿಧಿಸಿರುವ ತಂಡಗಳ ಸಂಖ್ಯೆ 7 ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News