×
Ad

ಉಡುಪಿಯಲ್ಲಿ ‘ಸಂಭ್ರಮ ರಾಷ್ಟ್ರೀಯ ಕಿರುಚಿತ್ರ ಸ್ಪರ್ಧೆ-2018’

Update: 2018-04-13 23:26 IST

ಉಡುಪಿ, ಎ.13: ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದ ‘ಸಂಭ್ರಮ ಕಿರುಚಿತ್ರ ಸ್ಪರ್ಧೆ-2018’ ಸೆಪ್ಟೆಂಬರ್ ತಿಂಗಳಲ್ಲಿ ಉಡುಪಿಯಲ್ಲಿ ನಡೆಯಲಿದೆ. ವಿವಿಧ ಭಾಷೆಗಳ ಕಿರು ಚಿತ್ರಗಳನ್ನು ಆಯ್ಕೆಗೆ ಪರಿಗಣಿಸಲಾಗುವುದು.

ಈಗಾಗಲೇ ಕಿರುಚಿತ್ರಗಳನ್ನು ಆಹ್ವಾನಿಸಿದ್ದು ಹೊಸ ಕಲಾವಿದರ, ಚಲನಚಿತ್ರ ನಿರ್ಮಾಣದ ಹೊಸಬರಿಗೆ ಇದು ಒಂದು ವೇದಿಕೆಯಾಗಿರುತ್ತದೆ. ಹೊಸ ಕಿರುಚಿತ್ರ ನಿರ್ಮಾತೃರನ್ನು ಪ್ರೇರೇಪಿಸುವ ಮತ್ತು ಹುರಿದುಂಬಿಸುವ ಕೆಲಸವನ್ನು ಈ ಮೂಲಕ ಮಾಡಲಾಗುತ್ತದೆ. ಕಾರ್ಯಕ್ರಮದಲ್ಲಿ ಕನ್ನಡ ಹಾಗೂ ತುಳು ಚಿತ್ರಗಳ ನಟರು ಭಾಗವಹಿಸಲಿರುವರು.

ಆಸಕ್ತರು ಕಿರುಚಿತ್ರಗಳನ್ನು ಸಂದೀಪ್ ಕಾಮತ್ ಅಜೆಕಾರು (ಮೊ: 9964006869), ಭುವನೇಶ್ ಪ್ರಭು ಹಿರೇಬೆಟ್ಟು (ಮೊ: 8951249373), ಸುಹಾಸ್ ಶೆಣೈ ಮಣಿಪಾಲ (ಮೊ:7760064671) ಇವರಿಗೆ ಕಿರುಚಿತ್ರಗಳನ್ನು ಆಗಸ್ಟ್ ತಿಂಗಳಾಂತ್ಯದೊಳಗೆ ಸಲ್ಲಿಸಬಹುದ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News