×
Ad

ಉಡುಪಿ: ಯಕ್ಷಗಾನ ರಂಗ ಶಿಕ್ಷಣ ತರಬೇತಿ ಶಿಬಿರ

Update: 2018-04-13 23:29 IST

ಉಡುಪಿ, ಎ.13: ತಂತ್ರಾಡಿ ಶ್ರೀದುರ್ಗಾಪರಮೇಶ್ವರಿ ಯಕ್ಷಗಾನ ಕಲಾರಂಗ ಮಕ್ಕಳ ಮೇಳ ಇವರಿಂದ ಪ್ರತಿ ವರ್ಷದಂತೆ ಈ ಬಾರಿಯೂ ಎ.15 ರಿಂದ ಮೇ 25ರ ತನಕ ಉಚಿತ ಯಕ್ಷಗಾನ ನೃತ್ಯಕಲಾ ಸಾಹಿತ್ಯ ರಂಗ ಶಿಕ್ಷಣವನ್ನು ಮಂದಾರ್ತಿಯಲ್ಲಿ ಆಯೋಜಿಸಲಾಗಿದೆ.

ಈ ತರಬೇತಿ ಶಿಬಿರದಲ್ಲಿ 12 ವರ್ಷದಿಂದ ಪಿಯುಸಿವರೆಗೆ ವ್ಯಾಸಂಗ ಮಾಡಿದ ಮಕ್ಕಳಿಗೆ ತರಬೇತಿಯನ್ನು ನೀಡಲಾಗುವುದು. ಯಕ್ಷಗಾನದ ವಿವಿಧ ಪ್ರಕಾರಗಳಾದ ಬಣ್ಣಗಾರಿಕೆ, ನೃತ್ಯ, ಪೋಷಾಕು ಕಟ್ಟಿಕೊಳ್ಳುವುದು, ಸಾಹಿತ್ಯ ಕಥೆ, ಕಲಿಕಾ ಮಕ್ಕಳಿಂದ ಮಾದರಿ ಪ್ರದರ್ಶನಕ್ಕೆ ಅವಕಾಶವಿದೆ. ಶ್ರೇಷ್ಠ ಕಲೆ ಯಕ್ಷಗಾನ ಮೈಗೂಡಿಸಿಕೊಳ್ಳುವ ಸನ್ನಡತೆಯ ಕಲಾಸಕ್ತ ಮಕ್ಕಳು ರಕ್ಷಕರ ಅನುಮತಿ ಪತ್ರದೊಂದಿಗೆ ಬಂದು ಶಿಬಿರದಲ್ಲಿ ಭಾಗವಹಿಸಬಹುದು. ಈ ತರಬೇತಿ ಶಿಬಿರದಲ್ಲಿ 12 ವರ್ಷದಿಂದ ಪಿಯುಸಿವರೆಗೆ ವ್ಯಾಸಂಗ ಮಾಡಿದ ಮಕ್ಕಳಿಗೆ ತರಬೇತಿಯನ್ನು ನೀಡಲಾಗುವುದು. ಯಕ್ಷಗಾನದ ವಿವಿಧ ಪ್ರಕಾರಗಳಾದ ಬಣ್ಣಗಾರಿಕೆ, ನೃತ್ಯ, ಪೋಷಾಕುಕಟ್ಟಿಕೊಳ್ಳುವುದು, ಸಾಹಿತ್ಯಕಥೆ, ಕಲಿಕಾ ಮಕ್ಕಳಿಂದ ಮಾದರಿ ಪ್ರದರ್ಶನಕ್ಕೆ ಅವಕಾಶವಿದೆ. ಶ್ರೇಷ್ಠಕಲೆ ಯಕ್ಷಗಾನ ಮೈಗೂಡಿಸಿಕೊಳ್ಳುವ ಸನ್ನಡತೆಯ ಕಲಾಸಕ್ತ ಮಕ್ಕಳು ರಕ್ಷಕರ ಅನುಮತಿ ಪತ್ರದೊಂದಿಗೆ ಬಂದು ಶಿಬಿರದಲ್ಲಿ ಭಾಗವಹಿಸಬಹುದು.

ದೂರದೂರಿನ ಮಕ್ಕಳಿಗೆ ಮಾತ್ರ ವಸತಿ, ಊಟದ ವ್ಯವಸ್ಥೆ ಮಾಡಲಾ ಗುವುದು. ಹೆಚ್ಚಿನ ವಿವರಗಳಿಗೆ ಹಿರಿಯಣ್ಣ ಶೆಟ್ಟಿಗಾರ್(ಮೊ:9449388958) ಇವರವನ್ನು ಸಂಪರ್ಕಿಸಬಹುದು. ತರಬೇತಿಯನ್ನು ಮಂದಾರ್ತಿ ಹೈಸ್ಕೂಲ್ ಹಿಂಭಾಗದ ತಂತ್ರಾಡಿ ರಸ್ತೆ ಹಾದು ಹೋಗುವ ಕಲಾ ಸಂಸ್ಥೆಯ ರಂಗ ಮಂದಿರ ಕಟ್ಟಡದಲ್ಲಿ ನೀಡಲಾಗುತ್ತದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News