×
Ad

ಥಾಣೆ-ದಾವಣಗೆರೆ, ಪುಣೆ-ಬೆಂಗಳೂರು ನಡುವೆ ಸೆ.ಫೈನಲ್

Update: 2018-04-13 23:30 IST

ಉಡುಪಿ, ಎ.13: ಉಡುಪಿ ಜಿಲ್ಲಾ ಕ್ರಿಕೆಟ್ ಸಂಸ್ಥೆಯ ಆಶ್ರಯದಲ್ಲಿ ಮಾಹೆ ಡೀಮ್ಡ್ ವಿವಿ ಬೆಳ್ಳಿಹಬ್ಬದ ಅಂಗವಾಗಿ ಮಣಿಪಾಲದಲ್ಲಿ ಆಯೋಜಿಸಲಾ ಗಿರುವ ರಾಷ್ಟ್ರೀಯ ವೈದ್ಯರುಗಳ ಲೆದರ್‌ಬಾಲ್ ಕ್ರಿಕೆಟ್ ಪಂದ್ಯಾಟ ‘ಸಿಲ್ವರ್ ಕ್ರಿಕೆಟ್ ಲೀಗ್ -2018’ರಲ್ಲಿ ಥಾಣೆ, ದಾವಣಗೆರೆ, ಪುಣೆ ಹಾಗೂ ಬೆಂಗಳೂರು ತಂಡಗಳು ಸೆಮಿಫೈನಲ್ ಹಂತ ಪ್ರವೇಶಿಸಿದೆ.

 ಮೊದಲ ಸುತ್ತಿನ ಪಂದ್ಯಗಳ ಕೊನೆಗೆ ಅಗ್ರ ನಾಲ್ಕು ಸ್ಥಾನಗಳನ್ನು ಪಡೆದ ಥಾಣೆ ಸೂಪರ್ಬ್‌, ದಾವಣಗೆರೆ ಬ್ಲೆಂಡೆಡ್ ಕನ್ನಡಿಗಾಸ್, ಪದ್ಮಾಲಯ ಸ್ಟಾರ್ಸ್‌ ಪುಣೆ ಮತ್ತು ಬೆಂಗಳೂರು ಸ್ಪೆಸಾಲಿಸ್ಟ್ಸ್ ತಂಡಗಳು ಮುಂದಿನ ಸುತ್ತಿನಲ್ಲಿ ಆಡುವ ಅರ್ಹತೆ ಪಡೆದಿವೆ.

ಮೊದಲ ಸುತ್ತಿನ ಪಂದ್ಯಗಳ ಕೊನೆಗೆ ಅಗ್ರ ನಾಲ್ಕು ಸ್ಥಾನಗಳನ್ನು ಪಡೆದ ಥಾಣೆ ಸೂಪರ್ಬ್‌, ದಾವಣಗೆರೆ ಬ್ಲೆಂಡೆಡ್ ಕನ್ನಡಿಗಾಸ್, ಪದ್ಮಾಲಯ ಸ್ಟಾರ್ಸ್‌ ಪುಣೆ ಮತ್ತು ಬೆಂಗಳೂರು ಸ್ಪೆಸಾಲಿಸ್ಟ್ಸ್ ತಂಡಗಳು ಮುಂದಿನ ಸುತ್ತಿನಲ್ಲಿ ಆಡುವ ಅರ್ಹತೆ ಪಡೆದಿವೆ. ಇಂದಿನ ಪಂದ್ಯಗಳಲ್ಲಿ ಟೀಂ ಮಣಿಪಾಲ ತಂಡ, ಮುಂಬಯಿ ತಂಡದ ಕೈಯಲ್ಲಿ ಆರು ವಿಕೆಟ್‌ಗಳ ಅಂತರದ ಸೋಲು ಅನುಭವಿಸಿತು. ಮಣಿಪಾಲ ತಂಡ ನೀಡಿದ ನೀಡಿದ 122 ರನ್‌ಗಳ ವಿಜಯದ ಗುರಿಯನ್ನು ಮುಂಬಯಿ ತಂಡ ನಾಲ್ಕು ವಿಕೆಟ್‌ಗಳ ನಷ್ಟಕ್ಕೆ ತಲುಪಿತು.

ದಾವಣಗೆರೆ ತಂಡ, ಮಂಗಳೂರು ತಂಡವನ್ನು ಸೋಲಿಸಿತು.ದಾವಣಗೆರೆ ತಂಡ ಗೆಲುವಿಗೆ ನೀಡಿದ 163 ರನ್‌ಗಳ ವಿಜಯದ ಗುರಿಯನ್ನು ತಲುಪಲಾಗದ ಮಂಗಳೂರು ತಂಡ 83 ರನ್‌ಗಳಿಗೆ ಆಲೌಟಾಯಿತು.

ಮತ್ತೊಂದು ಪಂದ್ಯದಲ್ಲಿ ಬೆಂಗಳೂರು ತಂಡ, ಹೈದರಾಬಾದ್ ತಂಡವನ್ನು ಹತ್ತು ವಿಕೆಟ್‌ಗಳಿಂದ ಹಿಮ್ಮೆಟ್ಟಿಸಿತು. ಹೈದರಾಬಾದ್ ನೀಡಿದ 130 ರನ್‌ಗಳ ಗುರಿಯನ್ನು ಬೆಂಗಳೂರು ತಂಡ, ಅಜೇಂದ್ರ (64) ಮತ್ತು ಗುರು (48) ಇವರ ನಡುವಿನ ಔಟಾಗದ 130 ರನ್‌ಗಳ ಆರಂಭಿಕ ವಿಕೆಟ್ ಜೊೆಯಾಟ ದಿಂದ ಸುಲಭದಲ್ಲಿ ತಲುಪಿತು.
ಕೊನೆಯ ಪಂದ್ಯದಲ್ಲಿ ಥಾಣೆ ತಂಡ ಗೋವಾ ತಂಡವನ್ನು ಆರು ವಿಕೆಟ್‌ಗಳಿಂದ ಮಣಿಸಿತು. ಗೋವಾ ನೀಡಿದ 122 ರನ್‌ಗಳ ವಿಜಯದ ಗುರಿಯನ್ನು ತಲಪಲು ಥಾಣೆ ತಂಡ ನಾಲ್ಕು ವಿಕೆಟ್‌ಗಳನ್ನಷ್ಟೇ ಕಳೆದಕೊಂಡಿತು.

ಕೊನೆಯ ಪಂದ್ಯದಲ್ಲಿ ಥಾಣೆ ತಂಡ ಗೋವಾ ತಂಡವನ್ನು ಆರು ವಿಕೆಟ್‌ಗಳಿಂದ ಮಣಿಸಿತು. ಗೋವಾ ನೀಡಿದ 122 ರನ್‌ಗಳ ವಿಜಯದ ಗುರಿಯನ್ನು ತಲಪಲು ಥಾಣೆ ತಂಡ ನಾಲ್ಕು ವಿಕೆಟ್‌ಗಳನ್ನಷ್ಟೇ ಕಳೆದಕೊಂಡಿತು. ನಾಳೆ ಶನಿವಾರದಂದು ನಡೆಯುವ ಸೆಮಿಫೈನಲ್ ಪಂದ್ಯಗಳಲ್ಲಿ ಥಾಣೆ ತಂಡ ದಾವಣಗೆರೆಯನ್ನೂ ಹಾಗೂ ಪುಣೆ ತಂಡ ಬೆಂಗಳೂರು ತಂಡವನ್ನೂ ಎದುರಿಸಲಿವೆ. ಅಂತಿಮ ಪಂದ್ಯ ರವಿವಾರ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News