×
Ad

ಜುಜಾಟದ ಅಡ್ಡೆಗೆ ಪೊಲೀಸರ ದಾಳಿ: 8 ಮಂದಿಯ ಬಂಧನ; 2 ದ್ವಿಚಕ್ರ ವಾಹನ, ಮೊಬೈಲ್, ನಗದು ವಶ

Update: 2018-04-14 12:48 IST

ಬಂಟ್ವಾಳ, ಎ. 14: ಜುಜಾಟದ ಅಡ್ಡೆಯೊಂದಕ್ಕೆ ಬಂಟ್ವಾಳ ಗ್ರಾಮಾಂತರ ಪೊಲೀಸರು ದಾಳಿ ನಡೆಸಿ ಎಂಟು ಮಂದಿಯನ್ನು ಬಂಧಿಸಿದ ಘಟನೆ ತಾಲೂಕಿನ ಪಂಜಿಕಲ್ಲುಪದವಿನ ಮಬ್ಬರಿಯ ಬಯ್ಲು ಎಂಬಲ್ಲಿ ಶುಕ್ರವಾರ ನಡೆದಿದೆ.

ಪಂಜಿಕಲ್ಲುಪದವಿನ ಮಬ್ಬರಿಯ ಬಯ್ಲು ಎಂಬಲ್ಲಿ ಅಕ್ರಮ ಜೂಜಾಟದಲ್ಲಿ ತೊಡಗಿಕೊಂಡಿದ್ದರು ಎನ್ನಲಾಗಿದ್ದು, ಖಚಿತ ಮಾಹಿತಿ ಮೇರೆಗೆ ಬಂಟ್ವಾಳ ಗ್ರಾಮಾಂತರ ಪೊಲೀಸರು ಅಡ್ಡೆಗೆ ದಾಳಿ ನಡೆಸಿ, ಜೂಜಾಟದಲ್ಲಿ ತೊಡಗಿದವರನ್ನು ಬಂಧಿಸಿ, 5060 ರೂ., 2 ದ್ವಿಚಕ್ರ ವಾಹಗಳು ಹಾಗೂ 5 ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಇವುಗಳ ಮೌಲ್ಯ ಸುಮಾರು 41,560 ರೂ. ಎಂದು ಅಂದಾಜಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕಾರ್ಯಚರಣೆಯಲ್ಲಿ ಪ್ರೊಬೆಷನರಿ ಐಪಿಎಸ್ ಅಕ್ಷಯ್ ಎಂ. ಹಾಕೆ, ಬಂಟ್ವಾಳ ಗ್ರಾಮಾಂತರ ಪಿಎಸ್ಸೈ ಪ್ರಸನ್ನ, ಸಿಬ್ಬಂದಿ ಎಚ್. ಸಿ ಜನಾರ್ದನ, ಮಾದವ, ಪಿ.ಸಿ. ಶಿವಕುಮಾರ್, ಮೋಹನ, ಕುಮಾರ್ ಅಂಗಡಿ ಮತ್ತಿ, ಸಿ.ಎಚ್.ಸಿ ಕಿರಣ ಭಾಗವಹಿಸಿದ್ದರು. ಈ ಸಂಬಂಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News