×
Ad

ವಿಕೆ ಫರ್ನಿಚರ್-ಇಲೆಕ್ಟ್ರಾನಿಕ್ಸ್, ವಿಕೆ ಲಿವಿಂಗ್ ಕಾನ್ಸೆಪ್ಟ್‌ನಲ್ಲಿ ಝೀರೊ ಡೌನ್‌ಮೇಮೆಂಟ್ ಸೇಲ್

Update: 2018-04-14 23:06 IST

ಮಂಗಳೂರು, ಎ. 14: ಯೆಯ್ಯಡಿ ಏರ್‌ಪೋರ್ಟ್ ರಸ್ತೆಯ ಲೋಬೊ ಚೇಂಬರ್ಸ್‌ನಲ್ಲಿರುವ ವಿ. ಕೆ. ಫರ್ನಿಚರ್ ಮತ್ತು ಇಲೆಕ್ಟ್ರಾನಿಕ್ಸ್ ಹಾಗು ಉರ್ವಾ-ಚಿಲಿಂಬಿಯ ಬೆನ್ಲಿನ್ ಕಟ್ಟಡದಲ್ಲಿರುವ ವಿ. ಕೆ. ಲಿವಿಂಗ್ ಕಾನ್ಸೆಪ್ಟ್ -ಶೋರೂಮ್‌ಗಳಲ್ಲಿ ಯಾವುದೇ ಡೌನ್‌ಪೇಮೆಂಟ್ ಮಾಡದೆ ಖರೀದಿ ಮಾಡುವ ಶಾಪಿಂಗ್ ಮೇಳ ಆಯೋಜಿಸಲಾಗಿದೆ.

ಈ ಮೇಳ ಎಪ್ರಿಲ್ 20ರವರೆಗೆ ನಡೆಯಲಿದ್ದು ಈ ಸಂದರ್ಭದಲ್ಲಿ ಗ್ರಾಹಕರು ಯಾವುದೇ ಸೊತ್ತು ಖರೀದಿ ಮಾಡುವ ವೇಳೆ ಮುಂಗಡ ಹಣ ನೀಡದೆ 18 ಮಾಸಿಕ ಕಂತುಗಳಲ್ಲಿ ಹಣವನ್ನು ಪಾವತಿಸುವ ಸೌಲಭ್ಯವನ್ನು ಕಲ್ಪಿಸಲಾಗಿದೆ. ಸುಮಾರು ಒಂದು ಸಾವಿರ ಮಾಸಿಕ ಪಾವತಿ ಶ್ರೇಣಿಯಿಂದ ಉತ್ಪನ್ನಗಳು ಲಭ್ಯವಿವೆ.

ವಿ.ಕೆ. ಫರ್ನಿಚರ್ ಸೋಫಾ ತಯಾರಿಕೆಯಲ್ಲಿ ಪ್ರಸಿದ್ಧ ಬ್ರಾಂಡ್ ಆಗಿದೆ. ಇಲ್ಲಿ ಬೆಲೆಗಳೂ ಪಾರದರ್ಶಕವಾಗಿದ್ದು, ಫರ್ನಿಚರ್ ಮತ್ತು ಇಲೆಕ್ಟ್ರಾನಿಕ್ಸ್‌ಗಳಿಗೆ ಎಕ್ಸ್‌ಚೇಂಜ್ ಕೊಡುಗೆಯೂ ಲಭ್ಯವಿದೆ. ವಿವಿಧ ವಿನ್ಯಾಸದ ಸಮಕಾಲೀನ ಪೀಠೋಪಕರಣಗಳು, ಒಳಾಂಗಣದ ಸಾಂಪ್ರದಾಯಿಕ ಪೀಠೋಪಕರಣಗಳು, ಆಧುನಿಕ ಬೆಡ್‌ರೂಂ ಸೆಟ್ಸ್, ವಾರ್ಡ್‌ರೋಬ್ಸ್, ಮಂಚಗಳು, ಡೈನಿಂಗ್ ಸೆಟ್‌ಗಳು, ಲಿವಿಂಗ್ ರೂಮಿನ ಸೋಫಾ ಸೆಟ್ಸ್, ಸ್ಟಡಿ ಟೇಬಲ್‌ಗಳು, ಮೊಡ್ಯುಲರ್ ಕಿಚನ್‌ಗಳು, ಶ್ರೇಷ್ಠ ಗುಣಮಟ್ಟದ ಕಚೇರಿ ಪೀಠೋಪಕರಣಗಳು, ಕಸ್ಟಮೈಸ್ಡ್ ಮತ್ತು ರೆಡಿಮೇಡ್ ದೀರ್ಘಬಾಳಿಕೆ ಬರುವ ಗ್ರಾಹಕ ವಸ್ತುಗಳು ಯೋಗ್ಯವಾದ ಬೆಲೆಗೆ ಲಭ್ಯವಿವೆ. ಬ್ರಾಂಡೆಡ್ ಉತ್ಪನ್ನಗಳಾದ ಸ್ಪೇಸ್‌ವುಡ್ ಬೆಡ್‌ರೂಂ ಸೆಟ್ ಮತ್ತು ಫರ್ನಿಚರ್, ಎಕ್ಸ್‌ಕ್ಲೂಸಿವ್ ಡ್ಯುರೋಫ್ಲೆಕ್ಸ್, ಕರ್ಲಾನ್, ಗ್ರೋದ್ರೆಜ್ ಮಾ್ಯಟ್ರೆಸ್‌ಗಳು ಕೂಡಾ ಇಲ್ಲಿ ಲಭ್ಯವಿವೆ.

ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಇಲೆಕ್ಟ್ರಾನಿಕ್ಸ್ ಕಂಪೆನಿಗಳಾದ ಎಲ್‌ಜಿ, ಸ್ಯಾಮಸಂಗ್, ಗೋದ್ರೆಜ್, ಫಿಲಿಪ್ಸ್, ವರ್ಲ್‌ಪೂಲ್, ಸೋನಿ, ಪ್ಯಾನಸೋನಿಕ್, ಐಎಫ್‌ಬಿ, ಲೋಯ್ಡಾ, ವಿಗಾರ್ಡ್ ಮುಂತಾದ ಬ್ರಾಂಡುಗಳ ಗೃಹಪಯೋಗಿ ಇಲೆಕ್ಟ್ರಾನಿಕ್ಸ್ ಸಾಮಾಗ್ರಿಗಳಾದ ವಾಶಿಂಗ್ ಮೆಶಿನ್, ರೆಫ್ರಿಜರೇಟರ್, ಮೊಬೈಲ್, ಗ್ಯಾಸ್‌ಸ್ಟವ್, ಎಲ್‌ಸಿಡಿ, ಮಿಕ್ಸರ್, ಗ್ರೈಂಡರ್, ಫ್ಯಾನ್ಸ್, ಎಸಿ, ಕೂಲರ್, ಇಸ್ತ್ರಿ, ಮೈಕ್ರೋವೇವ್‌ಓವನ್, ಗೀಸರ್, ಹೀಟರ್ಸ್‌, ಡೆಕೋರೇಟಿವ್ ವಸ್ತುಗಳು, ಗೃಹಪಯೋಗಿ ಸಾಮಾಗ್ರಿಗಳು, ಸ್ಯಾಮಸಂಗ್, ನೋಕಿಯಾ, ವಿವೊ,ಡೆಲ್, ಲೆನೊವೊ ಬ್ರಾಂಡುಗಳ ಮೊಬಾಯ್ಲಾಗಳು, ಲ್ಯಾಪ್‌ಟಾಪ್, ಕಂಪ್ಯೂಟರ್ ಮತ್ತಿತ್ತರ ಇಲೆಕ್ಟ್ರಾನಿಕ್ಸ್ ಉತ್ಪನ್ನಗಳೂ ದೊರೆಯುತ್ತವೆ.

ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಫರ್ನಿಚರ್‌ಗಳನ್ನು ಗ್ರಾಹಕರಿಗೆ ಬೇಕಾದಂತೆ ತಯಾರಿಸಿ ಕೊಡಲಾಗುವುದು. ಉಚಿತ ಹೋಮ್ ಡೆಲಿವರಿ ಹಾಗೂ ಬಜಾಜ್ ಫಿನ್‌ಸರ್ವ್‌ನಿಂದ ಸಾಲ ಸೌಲಭ್ಯ ಹಾಗೂ ಸುಲಭ ಕಂತುಗಳ ಖರೀದಿಯ ವ್ಯವಸ್ಥೆಯಿದೆ. ಶೋರೂಮ್‌ಗಳು ವಿಶಾಲವಾಗಿದ್ದು, ಫರ್ನಿಚರ್ ಮತ್ತು ಇಲೆಕ್ಟ್ರಾನಿಕ್ಸ್ ಸಾಮಾಗ್ರಿಗಳು ಕಡಿಮೆ ಇಎಮ್‌ಐಗಳ ಕಂತುಗಳಲ್ಲಿ ಪಡೆಯಬಹುದಾಗಿದೆ. ರವಿವಾರವೂ ಈ ಮಳಿಗೆಯು ತೆರೆದಿದ್ದು, ಇಲೆಕ್ಟ್ರಾನಿಕ್ ಮತ್ತು ಫರ್ನಿಚರ್ ಕಾಂಬೊ ಖರೀದಿಗೆ ವಿಶೇಷ ದರಕಡಿತವಿದೆ.

ಹೆಚ್ಚಿನ ಮಾಹಿತಿಗೆ www.vk-groups.com ಅಂತರ್ಜಾಲ  ಸಂಪರ್ಕಿಸಬಹುದು ಅಥವಾ furnitureandelectronics@vk-groups.comಅಥವಾ ಯೆಯ್ಯಡಿ ಏರ್‌ಪೋರ್ಟ್ ರಸ್ತೆಯ ಲೋಬೊ ಚೇಂಬರ್ಸ್‌ ಹಾಗೂ ಬೆನ್ಲಿನ್ ಬಿಲ್ಡಿಂಗ್, ಉರ್ವಾ ಚಿಲಿಂಬಿಗಳಲ್ಲಿರುವ ಮಳಿಗೆಯನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರವರ್ತಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News