×
Ad

​ದ.ಕ ಜಿಲ್ಲೆಯಲ್ಲಿ ಕಾಂಗ್ರೆಸ್‌ನ ಕಳೆದ ಬಾರಿಯ ಅಭ್ಯರ್ಥಿಗಳಿಗೆ ಮತ್ತೊಂದು ಅವಕಾಶ

Update: 2018-04-15 22:13 IST

ಮಂಗಳೂರು, ಎ.15: ದಕ್ಷಿಣ ಕನ್ನಡ ಜಿಲ್ಲೆಯ ಎಂಟು ವಿಧಾನ ಸಭಾ ಕ್ಷೇತ್ರಗಳಿಗೂ ಕಾಂಗ್ರೆಸ್ ಹಿಂದಿನ ಚುನಾವಣೆಯಲ್ಲಿ ಗೆದ್ದ ಹಾಗೂ ಸೋತ ಅಭ್ಯರ್ಥಿಗಳನ್ನು ಸೇರಿಸಿ ಮತ್ತೆ ಕಣಕ್ಕಿಳಿಸಿದೆ. ಮಂಗಳೂರು ಉತ್ತರ ದಕ್ಷಿಣ ಕೇತ್ರದಿಂದ ಶಾಸಕರದ ಜೆ.ಆರ್.ಲೋಬೊ, ಉತ್ತರ ಕ್ಷೇತ್ರದಿಂದ ಬಿ.ಎ.ಮೊಯ್ದಿನ್ ಬಾವ, ಮಂಗಳೂರು ಕ್ಷೇತ್ರದಿಂದ ಸಚಿವ ಯು.ಟಿ.ಖಾದರ್, ಮೂಡುಬಿದ್ರೆ ಕ್ಷೇತ್ರದಿಂದ ಅಭಯ ಚಂದ್ರ ಜೈನ್, ಬಂಟ್ವಾಳ ಕ್ಷೇತ್ರದಿಂದ ಸಚಿವ ರಮಾನಾಥ ರೈ, ಬೆಳ್ತಂಗಡಿ ಕ್ಷೇತ್ರದಿಂದ ವಸಂತ ಬಂಗೇರ ಹಾಗೂ ಪುತ್ತೂರು ಕ್ಷೇತ್ರದಿಂದ ಶಕುಂತಳಾ ಶೆಟ್ಟಿ ಹಾಗೂ ಸುಳ್ಯ ಕ್ಷೇತ್ರದಿಂದ ಕಳೆದ ಬಾರಿ ಅಲ್ಪ ಮತಗಳ ಅಂತರದಿಂದ ಸೋತ ಡಾ. ರಘು ಅವರನ್ನು ಈ ಬಾರಿ ಕಾಂಗ್ರೆಸ್ ಮತ್ತೆ ಕಣಕ್ಕಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News