ಪುಂಜಾಲಕಟ್ಟೆ: ಶ್ರೀಮುರುಘೇಂದ್ರ ಮಿತ್ರ ಮಂಡಳಿ ವಾರ್ಷಿಕೋತ್ಸವ

Update: 2018-04-16 11:47 GMT

ಬಂಟ್ವಾಳ, ಎ. 16: ಪುಂಜಾಲಕಟ್ಟೆ ಶ್ರೀಮುರುಘೇಂದ್ರ ಮಿತ್ರ ಮಂಡಳಿಯ 37ನೆ ಹಾಗೂ ಶ್ರೀಮುರುಘೇಂದ್ರ ವನಿತಾ ಸಮಾಜ ಇದರ 27ನೆ ವಾರ್ಷಿಕೋತ್ಸವ ರವಿವಾರ ಪುಂಜಾಲಕಟ್ಟೆ ಬಂಗ್ಲೆ ಮೈದಾನದಲ್ಲಿ ನಡೆಯಿತು.

ಬಳ್ಳಮಂಜ ಶ್ರೀ ಅನಂತೇಶ್ವರ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸ್ತರ ಡಾ.ಹರ್ಷ ಸಂಪಿಗೆತ್ತಾಯ ಅವರು ಅಧ್ಯಕ್ಷತೆ ವಹಿಸಿದ್ದರು. 
ಪುಂಜಾಲಕಟ್ಟೆ ಸ.ಪ್ರ.ದ.ಕಾಲೇಜು ಪ್ರಾಂಶುಪಾಲ ಪ್ರೊ.ಗಣಪತಿಭಟ್ ಕುಳಮರ್ವ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಸ್, ಉಪನ್ಯಾಸಕಿ, ದೃಶ್ಯ ಮಾದ್ಯಮ ನಿರೂಪಕಿ ಮಲ್ಲಿಕಾ ಶೆಟ್ಟಿ ಮಾತನಾಡಿದರು.

ಸಿವಿಲ್ ಗುತ್ತಿಗೆದಾರ ಮೋಹನ್ ಶೆಟ್ಟಿ ನರ್ವಲ್ದಡ್ಡ, ಒಡಿಯೂರು ಗ್ರಾಮವಿಕಾಸ ಯೋಜನೆಯ ವಾಯುವ್ಯ ವಲಯ ಸಂಯೋಜಕಿ ಸುಹಾಸಿನಿ, ಉದ್ಯಮಿ ಹೇಮಂತ ಕುಮಾರ್, ಶ್ರೀಮುರುಘೇಂದ್ರ ಮಿತ್ರ ಮಂಡಳಿ ಗೌರವಾಧ್ಯಕ್ಷ  ಮೋಹನ ಎಚ್. ಹೆಗ್ಡೆಬೆಟ್ಟು, ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ, ವನಿತಾ ಸಮಾಜದ ಗೌರವಾಧ್ಯಕ್ಷೆ ಅಮೃತಾ ಎಸ್., ಅಧ್ಯಕ್ಷೆ ಆಶಾ ದಿನಕರ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. 

ಈ ಸಂದರ್ಭದಲ್ಲಿ ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ವೈಷ್ಣವಿ ಶೆಟ್ಟಿ, ಚಿರಂಜೀವಿ ಕುಂಡೋಳಿ, ವಿಜಯಾ ಪ್ರವೀಣ್ ಬಹುಮಾನ ವಿಜೇತರ ವಿವರ ವಾಚಿಸಿದರು.

ಮಿತ್ರ ಮಂಡಳಿ ಕಾರ್ಯಕಾರಿ ಸಮಿತಿ ಸದಸ್ಯ ರಾಜೇಂದ್ರ ಕೆ.ವಿ. ಸ್ವಾಗತಿಸಿ, ಪ್ರಸ್ತಾವಿಸಿದರು. ಅಮೃತಾ ಎಸ್. ವಂದಿಸಿದರು. ಶಿಕ್ಷಕ ಹರಿಪ್ರಸಾದ್ ವಾಮದಪದವು ಕಾರ್ಯಕ್ರಮ ನಿರೂಪಿಸಿದರು. ಬಳಿಕ  ಸ್ಥಳೀಯ ಅಂಗನವಾಡಿ ಮಕ್ಕಳಿಂದ ಮತ್ತು ವನಿತಾ ಸಮಾಜ ಸದಸ್ಯೆಯರಿಂದ ವಿವಿಧ ವಿನೋದಾವಳಿಗಳು ಮತ್ತು ಮಿತ್ರ ಮಂಡಳಿ ಸದಸ್ಯರಿಂದ "ಗೊತ್ತಾನಗ ಪೊರ್ತಾಂಡ್" ತುಳು ನಾಟಕ ಪ್ರದರ್ಶನ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News