×
Ad

ತೆರಿಗೆ ಹೆಸರಲ್ಲಿ ಮೋದಿ ಮೋಸ: ಕಾಂಗ್ರೆಸ್ ಆರೋಪ

Update: 2018-04-17 18:45 IST

ಮಂಗಳೂರು, ಎ.17: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ದೇಶದಲ್ಲಿ ಅಧಿಕಾರಕ್ಕೆ ಬಂದ ಬಳಿಕ ‘ಒಂದು ದೇಶ-ಒಂದು ತೆರಿಗೆ’ ಎಂದು ಹೇಳಿ ಈಗ 13ಕ್ಕೂ ಅಧಿಕ ವಿವಿಧ ಸ್ತರದ ತೆರಿಗೆ ವಿಧಿಸುವ ಮೂಲಕ ವ್ಯಾಪಾರಸ್ಥರು, ಜನಸಾಮಾನ್ಯರು ಹೈರಾಣ ಆಗುವಂತೆ ಮಾಡಿದೆ ಎಂದು ದ.ಕ. ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಧನಂಜಯ ಅಡ್ಪಂಗಾಯ ಆರೋಪಿಸಿದರು.

ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ವಿಶ್ವದ 115 ದೇಶದಲ್ಲಿ ಭಾರತ ಪ್ರಪಂಚದಲ್ಲಿ 2ನೇ ಅತಿ ಹೆಚ್ಚಿನ ಟ್ಯಾಕ್ಸ್ ವಿಧಿಸುವ ದೇಶವಾಗಿದೆ. ಒಂದೇ ತೆರಿಗೆ ಹೇಳಿ 13ಕ್ಕೂ ಹೆಚ್ಚು ವಿಧದಲ್ಲಿ ತೆರಿಗೆ ವಿಧಿಸುತ್ತಿರುವುದು ಜನತೆಗೆ ಮಾಡುತ್ತಿರುವ ಮೋಸವಾಗಿದೆ. ಈ ರೀತಿಯ ತೆರಿಗೆಯಿಂದ ವ್ಯಾಪಾರಿಗಳು, ಉತ್ಪಾದಕರು, ಗ್ರಾಹಕರು ಸಂಕಷ್ಟಕ್ಕೀಡಾಗಿದ್ದಾರೆ. ಈ ತೆರಿಗೆಗಳು ಇಲಾಖೆಯಿಂದ ಇಲಾಖೆಗೆ ಹೋಗಿ ವಾಪಸ್ ತೆಗೆಯಲು ಕಷ್ಟವಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಪ್ರಚಾರ ಸಮಿತಿ ಅಧ್ಯಕ್ಷ ಸದಾಶಿವ ಶೆಟ್ಟಿ, ದಕ್ಷಿಣ ಕ್ಷೇತ್ರ ಪ್ರಚಾರ ಸಮಿತಿಯ ಅಧ್ಯಕ್ಷ ಡೆನ್ನಿಸ್ ಡಿಸಿಲ್ವ, ಮಂಗಳೂರು ತಾಪಂ ಅಧ್ಯಕ್ಷ ಮುಹಮ್ಮದ್ ಮೋನು, ನೀರಜ್‌ಚಂದ್ರಪಾಲ್, ನಝೀರ್ ಬಜಾಲ್ ಮತ್ತಿತರರು ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News