×
Ad

ಎಳ್ಳಾರೆ ಇರ್ವತ್ತೂರು : ಬ್ರಹ್ಮರಥೋತ್ಸವ

Update: 2018-04-17 19:00 IST

ಹೆಬ್ರಿ,ಎ.17 : ಇತಿಹಾಸ ಪ್ರಸಿದ್ಧ ಎಳ್ಳಾರೆಯ ಇರ್ವತ್ತೂರು ಶ್ರೀ ಕ್ಷ್ಮೀ ಜನಾರ್ಧನ ದೇವಸ್ಥಾನದ ಬ್ರಹ್ಮ ರಥೋತ್ಸವವವು ಸೋಮವಾರ ವೇದಮೂರ್ತಿ ಅಂಡಾರು ವಿಶ್ವನಾಥ ತಂತ್ರಿಯವರ ನೇತೃತ್ವದಲ್ಲಿ ಇತ್ತೀಚೆಗೆ ನಡೆಯಿತು . ಕೇರಳ ಚೆಂಡೆ, ಪೂಜಾ ವಿಧಿವಿಧಾನಗಳು ನಡೆದವು.

ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಎಂ ಶಿವರಾಂ ಶೆಟ್ಟಿ ,ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ  ಯೋಗೀಶ್ ಮಲ್ಯ, ಕಾವಲು ಸಮಿತಿ ಅಧ್ಯಕ್ಷ ಹರೀಶ್ ಪಂಚಮಿ, ಕಡ್ತಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಅರುಣ್ ಕುಮಾರ್ ಹೆಗ್ಡೆ, ಪಮ್ಮೊಟ್ಟು ಸುಂದರ ಶೆಟ್ಟಿ ಉಪಸ್ಥಿತರಿದ್ದರು. ಉಡುಪಿ ಜಿಲ್ಲೆಯ ವಿವಿಧ ಭಾಗಗಳಿಂದ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಭಕ್ತರು ಪಾಲ್ಗೊಂಡಿದ್ದರು,

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News