ನಶೀದ್‌ಗೆ ಚುನಾವಣೆಯಲ್ಲಿ ಸ್ಪರ್ಧಿಸುವ ಹಕ್ಕು ಮರಳಿಸಿ: ವಿಶ್ವಸಂಸ್ಥೆ

Update: 2018-04-17 17:53 GMT

ವಿಶ್ವಸಂಸ್ಥೆ, ಎ. 17: ಪರಿಪೂರ್ಣವಲ್ಲದ ಕಾನೂನುಗಳ ಅಡಿಯಲ್ಲಿ ಮಾಲ್ದೀವ್ಸ್‌ನ ಮಾಜಿ ಅಧ್ಯಕ್ಷ ಮುಹಮ್ಮದ್ ನಶೀದ್ ವಿರುದ್ಧದ ಭಯೋತ್ಪಾದನೆ ಆರೋಪಗಳು ಸಾಬೀತಾಗಿವೆ ಹಾಗೂ ಈ ಕಾನೂನುಗಳಲ್ಲಿ ಗಂಭೀರ ಲೋಪದೋಷಗಳಿವೆ ಎಂದು ವಿಶ್ವಸಂಸ್ಥೆಯ ಮಾನವಹಕ್ಕುಗಳ ಮಂಡಳಿ ಹೇಳಿದೆ. ಹಾಗಾಗಿ, ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುವ ಅವರ ಹಕ್ಕನ್ನು ದೇಶ ಮರಳಿಸಬೇಕು ಎಂದಿದೆ.

ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ದೇಶದ ಮೊದಲ ನಾಯಕ ನಶೀದ್‌ರಿಗೆ ಭಯೋತ್ಪಾದನೆ ಆರೋಪಗಳ ಅಡಿಯಲ್ಲಿ 2015ರ ಮಾರ್ಚ್‌ನಲ್ಲಿ 13 ವರ್ಷಗಳ ಜೈಲುವಾಸದ ಶಿಕ್ಷೆ ವಿಧಿಸಲಾಗಿದೆ.

ತನ್ನ ಅಧಿಕಾರಾವಧಿಯಲ್ಲಿ ದೇಶದ ಮುಖ್ಯ ಕ್ರಿಮಿನಲ್ ನ್ಯಾಯಾಧೀಶ ಅಬ್ದುಲ್ಲಾ ಮುಹಮ್ಮದ್‌ರನ್ನು ಸ್ವೇಚ್ಛಾಚಾರದಿಂದ ಬಂಧಿಸಿರುವುದಕ್ಕಾಗಿ ಅವರ ವಿರುದ್ಧ ಭಯೋತ್ಪಾದನೆ ಆರೋಪಗಳನ್ನು ಹೊರಿಸಲಾಗಿತ್ತು.

ವಿದೇಶಗಳ ಒತ್ತಡದ ಹಿನ್ನೆಲೆಯಲ್ಲಿ ಬ್ರಿಟನ್‌ನಲ್ಲಿ ಚಿಕಿತ್ಸೆ ಪಡೆಯಲು ಅವರಿಗೆ ಅವಕಾಶ ನೀಡಲಾಗಿತ್ತು. ಈಗ ಅವರು ಬ್ರಿಟನ್‌ನಲ್ಲಿ ಆಶ್ರಯ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News