‘ನ್ಯೂಯಾರ್ಕ್ ಟೈಮ್ಸ್’, ‘ನ್ಯೂಯಾರ್ಕರ್’ ಪತ್ರಿಕೆಗಳಿಗೆ ‘ಪುಲಿಟ್ಝರ್ ಪ್ರಶಸ್ತಿ’

Update: 2018-04-17 17:44 GMT

ನ್ಯೂಯಾರ್ಕ್, ಎ. 17: ಹಾಲಿವುಡ್ ನಟಿಯರಿಗೆ ಲೈಂಗಿಕ ಕಿರುಕುಳ ನೀಡಿದ ಚಿತ್ರ ನಿರ್ಮಾಪಕ ಹಾರ್ವೆ ವೀನ್‌ಸ್ಟೀನ್ ಬಗ್ಗೆ ಸ್ಫೋಟಕ ವರದಿ ಮಾಡಿರುವುದಕ್ಕಾಗಿ ‘ನ್ಯೂಯಾರ್ಕ್ ಟೈಮ್ಸ್’ ಮತ್ತು ‘ನ್ಯೂಯಾರ್ಕರ್’ ಪತ್ರಿಕೆಗಳಿಗೆ ಸೋಮವಾರ ‘ಪುಲಿಟ್ಝರ್ ಪ್ರಶಸ್ತಿ’ಗಳನ್ನು ನೀಡಲಾಗಿದೆ.

ಪ್ರತಿಷ್ಠಿತ ಪ್ರಶಸ್ತಿಯನ್ನು ಜೋಡಿ ಕ್ಯಾಂಟರ್ ಮತ್ತು ಮೇಗನ್ ಟ್ವೋಹಿ ನೇತೃತ್ವದ ‘ನ್ಯೂಯಾರ್ಕ್ ಟೈಮ್ಸ್’ ತಂಡ ಮತ್ತು ‘ನ್ಯೂಯಾರ್ಕರ್’ ವರದಿಗಾರ ರೋನನ್ ಫಾರೋ ಅವರಿಗೆ ಘೋಷಿಸಲಾಗಿದೆ.

ಈ ವರದಿಗಳು ಹಾಲಿವುಡ್ ಮೊಗಲ್ ವೀನ್‌ಸ್ಟೀನ್ ಮತ್ತು ಇತರ ಪ್ರಭಾವಿ ವ್ಯಕ್ತಿಗಳು ಶಾಮೀಲಾದ ಹಲವಾರು ಲೈಂಗಿಕ ಕಿರುಕುಳ ಹಗರಣಗಳನ್ನು ಬೆಳಕಿಗೆ ತಂದವು.

ಕಳೆದ ಅಕ್ಟೋಬರ್‌ನಲ್ಲಿ ನ್ಯೂಯಾರ್ಕ್ ಟೈಮ್ಸ್ ಮತ್ತು ನ್ಯೂಯಾರ್ಕರ್ ಲೇಖನಗಳು ವರದಿಗಳನ್ನು ಪ್ರಕಟಿಸಿದ ಬಳಿಕ, ಈ ಹಾಲಿವುಡ್ ನಿರ್ಮಾಪಕ ಅತ್ಯಾಚಾರದಿಂದ ಲೈಂಗಿಕ ಕಿರುಕುಳದವರೆಗಿನ ಹಲವಾರು ಲೈಂಗಿಕ ಕಿರುಕುಳಗಳನ್ನು ತಮಗೆ ನೀಡಿದ್ದಾನೆ ಎಂಬುದಾಗಿ 100ಕ್ಕೂ ಅಧಿಕ ಮಹಿಳೆಯರು ಬಹಿರಂಗವಾಗಿ ಆರೋಪಿಸಿದ್ದಾರೆ.

ಇದರ ಫಲವಾಗಿಯೇ ‘.................#.......................ಮೀ ಟೂ’ ಅಭಿಯಾನ ಆರಂಭಗೊಂಡಿತು. ಈ ಅಭಿಯಾನದ ಪರವಾಗಿ ಹಲವಾರು ಪ್ರಭಾವಿ ವ್ಯಕ್ತಿಗಳು ತಮ್ಮ ಹುದ್ದೆ ಮತ್ತು ಪ್ರತಿಷ್ಠೆಯನ್ನು ಕಳೆದುಕೊಂಡಿದ್ದಾರೆ.

ವೀನ್‌ಸ್ಟೀನ್‌ಗೆ ಸಂಕಷ್ಟಗಳ ಸರಮಾಲೆ

 ‘ನ್ಯೂಯಾರ್ಕ್ ಟೈಮ್ಸ್’ ಮತ್ತು ‘ನ್ಯೂಯಾರ್ಕರ್’ ಪತ್ರಿಕೆಗಳ ದಿಟ್ಟ ವರದಿಗಳ ಫಲವಾಗಿ ಹಾರ್ವೆ ವೀನ್‌ಸ್ಟೀನ್‌ನ ಮದುವೆ ಮುರಿಯಿತು. ಅವನ ವಿರುದ್ಧ ಲಂಡನ್, ಲಾಸ್ ಏಂಜಲಿಸ್ ಮತ್ತು ನ್ಯೂಯಾರ್ಕ್‌ಗಳಲ್ಲಿ ಪೊಲೀಸ್ ತನಿಖೆಗಳು ನಡೆಯುತ್ತಿವೆ. ಅವನ ವಿರುದ್ಧ ಹಲವಾರು ಸಿವಿಲ್ ವ್ಯಾಜ್ಯಗಳು ದಾಖಲಾದವು. ಅವನ ಹಿಂದಿನ ಚಿತ್ರ ನಿರ್ಮಾಣ ಕಂಪೆನಿಯು ತನ್ನನ್ನು ದಿವಾಳಿ ಎಂದು ಘೋಷಿಸುವಂತೆ ಅರ್ಜಿ ಸಲ್ಲಿಸಬೇಕಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News