ಕಥುವಾ ಪ್ರಕರಣದ ಆರೋಪಿಗಳಿಗೆ ಶಿಕ್ಷೆಗೆ ಆಗ್ರಹಿಸಿ ಎರ್ಮಾಳಿನಲ್ಲಿ ಧರಣಿ
Update: 2018-04-17 23:39 IST
ಪಡುಬಿದ್ರಿ,ಎ.17 : ಜಮ್ಮುವಿನಲ್ಲಿ ನಡೆದ ಬಾಲಕಿಯ ಅತ್ಯಾಚಾರ, ಹತ್ಯೆಯನ್ನು ಖಂಡಿಸಿ ಪಡುಬಿದ್ರಿ ಸಮೀಪದ ಎರ್ಮಾಳು ಜಾಮಿಯಾ ಮಸೀದಿ ಮುಂಭಾಗದಲ್ಲಿ ಮೇಣದ ಬತ್ತಿ ಹಿಡಿಯುವ ಮೂಲಕ ಸಾರ್ವಜನಿಕರು ಪ್ರತಿಭಟಿಸಿದರು.
ಈ ಸಂದರ್ಭದಲ್ಲಿ ಮಸೀದಿ ಖತೀಬರಾದ ಶಬ್ಬೀರ್ ಫೈಝಿಯವರು ಮಾತನಾಡಿ, ಏನೂ ಅರಿಯದ ಪುಟ್ಟ ಕಂದಮ್ಮನನ್ನು ಪುಣ್ಯಸ್ಥಳದೊಳಗೆ ಸಮೂಹಿಕವಾಗಿ ಅತ್ಯಾಚಾರ ಮಾಡಿ ಹತ್ಯೆಗೈದ ದುಷ್ಟರಿಂದಾಗಿ ಇಡೀ ದೇಶವೇ ತಲೆ ತಗ್ಗಿಸುವಂತಾಗಿದೆ. ಅವರಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಎಂದರು.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಂದಾಳು ಇಲಿಯಾಸ್ ಪಲಿಮಾರು, ಆಸೀಫ್ ಎರ್ಮಾಳು, ಪಿಎಫ್ಐ ಮುಖಂಡ ತೌಫೀಕ್ ಪಡು ಉಚ್ಚಿಲ, ಮುಶೀರ್ ಎರ್ಮಾಳು, ಆಸೀಫ್ ಬಿ.ಎಂ ಉಚ್ಚಿಲ ಇನ್ನಿತರರು ಉಪಸ್ಥಿತರಿದ್ದರು.