ಎ.20ರಂದು ತೋನ್ಸೆಯಲ್ಲಿ ಸುನ್ನೀ ಇಜ್ತೀಮಾ
Update: 2018-04-18 19:12 IST
ಉಡುಪಿ, ಎ.18: ಸುನ್ನೀ ದಾವತೇ ಇಸ್ಲಾಮೀ ಉಡುಪಿ ಜಿಲ್ಲೆ ಇದರ ಪ್ರಥಮ ವಾರ್ಷಿಕ ಸುನ್ನೀ ಇಜ್ತೀಮಾ ಕಾರ್ಯಕ್ರಮವು ಎ.20ರಂದು ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 10ಗಂಟೆಯವರೆಗೆ ತೋನ್ಸೆ ದಾರುಸ್ಸಲಾಮ್ ಆಂಗ್ಲ ಮಾಧ್ಯಮ ಶಾಲಾ ವಠಾರದಲ್ಲಿ ಜರಗಲಿದೆ.
ಮುಖ್ಯ ಭಾಷಣಕಾರರಾಗಿ ಮುಂಬೈ ಸುನ್ನೀ ದಾವತೇ ಇಸ್ಲಾಮಿಯ ಅಮೀರೆ ಅಲ್ಲಾಮ ಮೌಲಾನ ಮುಹಮ್ಮದ್ ಶಾಕಿರ್ ಅಲಿ ನೂರಿ, ಮುಂಬೈಯ ಕಾರಿ ಮುಹಮ್ಮದ್ ರಿಝ್‌ವಾನ್ ಖಾನ್ ಹಾಗೂ ಜಿಲ್ಲೆಯ ಅನೇಕ ಉಲಮ ಹಾಗೂ ಸಾದಾತುಗಳು ಭಾಗವಹಿಸಲಿರುವರು ಎಂದು ಪ್ರಕಟಣೆ ತಿಳಿಸಿದೆ.