×
Ad

ಮೇ 2ರಿಂದ ಪ.ಪೂ.ಕಾಲೇಜು ಆರಂಭ ಅಸಪರ್ಮಕ: ಕೆ.ಕೆ.ಮಂಜುನಾಥ್

Update: 2018-04-18 20:58 IST

ಉಡುಪಿ, ಎ.18: ಅಧಿಕಾರಿಗಳು ಅವೈಜ್ಞಾನಿಕವಾಗಿ 2018-19ನೆ ಸಾಲಿನಲ್ಲಿ ಮೇ 2ರಿಂದ ಪದವಿ ಪೂರ್ವ ಕಾಲೇಜುಗಳನ್ನು ಆರಂಭ ಮಾಡುತ್ತಿರು ವುದು ಸರಿಯಾದ ಕ್ರಮ ಅಲ್ಲ ಎಂದು ವಿಧಾನ ಪರಿಷತ್ ಚುನಾವಣೆಯ ನೈಋತ್ಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಕೆ.ಮಂಜುನಾಥ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

ಉಡುಪಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಮಯದಲ್ಲಿ ಎಲ್ಲ ಕಡೆಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರವಿದ್ದು, ಹಾಸ್ಟೆಲ್‌ಗಳನ್ನು ನಡೆಸುವುದು ಕಷ್ಟ. ಶಿಕ್ಷಣ ಇಲಾಖೆಯು ಬೋಧಕರಿಗೆ 30ರ ಬದಲು 10 ಗಳಿಕೆಯ ರಜೆಯನ್ನು ಮಾತ್ರ ನೀಡುತ್ತಿದೆ. ಬೇಸಿಗೆ ರಜೆಯ ಸಂದರ್ಭ ಉಪನ್ಯಾಸ ಕರು ಪಿಯುಸಿ ವೌಲ್ಯಮಾಪನ, ಚುನಾವಣಾ ಕರ್ತವ್ಯ ನಿರ್ವಹಿಸುತ್ತಿರುತ್ತಾರೆ ಎಂದರು.

ಆದುದರಿಂದ ಈ ಹಿಂದಿನ ಶೈಕ್ಷಣಿಕ ವರ್ಷಗಳಂತೆ ಜೂ.1ರಿಂದ ಪದವಿ ಪೂರ್ವ ಕಾಲೇಜುಗಳನ್ನು ಪ್ರಾರಂಭಿಸಬೇಕು. ಮುಂದೆ ಇದರ ವಿರುದ್ಧ ಹೋರಾಟ ನಡೆಸಲಾಗುವುದು. ರಜಾ ರಹಿತ ಇಲಾಖೆಯನ್ನಾಗಿ ಘೋಷಿಸಿ 30 ಗಳಿಕೆ ರಜೆ ಮತ್ತು ಎರಡನೆ ಶನಿವಾರ ರಜಾ ಸೌಲಭ್ಯ ನೀಡಲು ಒತ್ತಾ ಯಿಸಲಾಗು ವುದು ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ನೈಋತ್ಯ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಸ್. ಪಿ.ದಿನೇಶ್, ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜನಾರ್ದನ ತೋನ್ಸೆ, ದಿನೇಶ್ ಪುತ್ರನ್, ಗಣೇಶ್ ಉಪಸ್ಥಿತರಿದ್ದರು.

ಸಭಾಪತಿ ಸ್ಪಷ್ಟೀಕರಣ ನೀಡಲಿ
ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ವಿಧಾನ ಪರಿಷತ್‌ನ ಸಭಾಪತಿ ಡಿ.ಎಚ್.ಶಂಕರಮೂರ್ತಿ ಅವರಿಗೆ ಸಂವಿಧಾನದ ಮೇಲೆ ನಂಬಿಕೆ ಇಲ್ಲ. ಸಭಾಪತಿ ಸ್ಥಾನದಲ್ಲಿದ್ದು ಕೊಂಡೆ ಪದವೀಧರರಿಗೆ ಮನವಿ ಪತ್ರ ಕಳುಹಿಸುತ್ತಿದ್ದಾರೆ. ಇದರಲ್ಲಿ ಅವರ ಯಾವುದೇ ಸಹಿ ಇಲ್ಲ. ಆದುದರಿಂದ ಇದು ಅವರ ಗಮನಕ್ಕೆ ಬಾರದೆ ಪಕ್ಷದವರೇ ಮಾಡಿರುವ ಕೃತ್ಯ ಎಂಬ ಬಗ್ಗೆ ಶಂಕರಮೂರ್ತಿ ಸ್ಪಷ್ಟನೆ ನೀಡಬೇಕು ಎಂದು ನೈಋತ್ಯ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಸ್. ಪಿ.ದಿನೇಶ್ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News