ಮಂಗಳೂರಿನಲ್ಲಿ ಅಕಾಲಿಕ ಮಳೆ
Update: 2018-04-19 20:54 IST
ಮಂಗಳೂರು, ಎ. 19: ನಗರ ಮತ್ತು ಹೊರವಲಯದಲ್ಲಿ ಗುರುವಾರ ರಾತ್ರಿ ಅಕಾಲಿಕ ಮಳೆಯಾಗಿದೆ.
ಕಳೆದ ಹಲವು ದಿನಗಳಿಂದ ಬಿಸಿಲ ಧಗೆಯಿಂದ ತತ್ತರಿಸಿದ್ದ ಜನತೆಗೆ ಸುರಿದ ಅಕಾಲಿಕ ಮಳೆಯು ತಂಪೆರೆದಿದೆ. ರಾತ್ರಿ 8 ಗಂಟೆಯ ಬಳಿಕ ಸಿಡಿಲು, ಮಿಂಚು ಸಹಿತ ಮಳೆಯಾಗಿದೆ. ಒಂದು ತಾಸಿಗೂ ಹೆಚ್ಚು ಕಾಲ ಮಳೆಯಾಗಿದೆ.